ಆಹಾರ ಬೆಳೆಗಳಿಗೂ ಆದ್ಯತೆ ನೀಡಿ

sgr krushi office
ಸಾಗರದ ಎಪಿಎಂಸಿ ಪ್ರಾಂಗಣದಲ್ಲಿ ಉಪವಿಭಾಗದ ಕೃಷಿ ನಿರ್ದೇಶಕರ ಕಚೇರಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಡಾ. ಕಿರಣಕುಮಾರ್, ಶಂಕರ, ಗಣಪತಿ, ರವಿ ಇತರರಿದ್ದರು.
Published on

ಸಾಗರ: ಮಲೆನಾಡು ಭತ್ತದ ಕಣಜ ಹೋಗಿ ಅಡಕೆ ಕಣಜವಾಗಿದೆ. ಭತ್ತ ಬೆಳೆಯುತ್ತಿದ್ದ ಜಾಗವನ್ನು ಅಡಕೆ ಅತಿಕ್ರಮಿಸಿದ್ದು, ಭತ್ತದ ಬೆಳೆ ಬಗ್ಗೆ ನಿರಾಸಕ್ತಿ ಬೇಡ. ಆಹಾರ ಬೆಳೆಗಳಿಗೂ ಆದ್ಯತೆ ನೀಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ನಗರದ ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ನಿರ್ಮಿಸಲಾದ ಸಾಗರ ಉಪವಿಭಾಗದ ಕೃಷಿ ನಿರ್ದೇಶಕರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಬೆಳೆ ಬೆಳೆಯುವಾಗ ಆ ಪ್ರದೇಶದ ಹವಾಮಾನ, ಅಲ್ಲಿಯ ಮಣ್ಣಿನ ಗುಣ, ಬರುವ ಸಲು ಎಲ್ಲವನ್ನೂ ಗಣನೆಗೆ ಇಟ್ಟುಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರ ರೈತರ ಪರವಾಗಿದ್ದು, ರೈತಪರ ಯೋಜನೆ ಜಾರಿಗೆ ತರುತ್ತಿದೆ. ಅಗತ್ಯ ಮಾಹಿತಿ ನೀಡಲು ಇಂತಹ ಮಾಹಿತಿ ಕೇಂದ್ರಗಳು ಅವಶ್ಯ. ಯೋಜನೆಗಳು ರೈತರಿಗೆ ಸರಿಯಾಗಿ ತಲುಪಬೇಕು. ಕೃಷಿಕರನ್ನು ಇಲಾಖೆ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿದರು.

ಸಲಿಗೆ ಔಷಧ ಸಿಂಪಡಿಸಬೇಕಾದರೆ ರೈತರು ಹೆಚ್ಚು ಜಾಗ್ರತೆ ವಹಿಸಬೇಕು. ಜಾಹೀರಾತುಗಳನ್ನು ಯಾವುದೋ ಔಷಧವನ್ನು ಸಲಿಗೆ ಸಿಂಪಡಿಸಬೇಡಿ. ಸಲು ಕಳೆದುಕೊಂಡು ನಷ್ಟ ಅನುಭವಿಸಿದ ಹಲವು ಉದಾಹರಣೆಗಳಿವೆ. ಹಾಗಾಗಿ ಕೃಷಿ ಇಲಾಖೆಯು ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಸೂಕ್ತ ತರಬೇತಿ ಪಡೆದು ಕೃಷಿಯಲ್ಲಿ ಪ್ರಾವೀಣ್ಯತೆ ಸಾಧಿಸಬೇಕು, ಇಂದು ಸಾಕಷ್ಟು ಯುವಜನರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿಯತ್ತ ಮುಖ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್, ನಗರಸಭೆ ಸದಸ್ಯರಾದ ಶಂಕರ, ಗಣಪತಿ, ನಾಗರತ್ನಾ ನಾರಾಯಣಯಪ್ಪ, ರವಿ, ಪ್ರಮುಖರಾದ ಚೇತನರಾಜ್ ಕಣ್ಣೂರು, ಕೆ.ಹೊಳೆಯಪ್ಪ, ಲೋಕೇಶ್, ಜೈಕುಮಾರ್. ವಿನಾಯಕ ರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net