ಅಭಿವೃದ್ಧಿಪರ ಕೆಲಸಗಳಿಗೆ ಆದ್ಯತೆ ನೀಡಿ

22ark2
ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದಲ್ಲಿ ಗ್ರಾಪಂ ನೂತನ ಕಟ್ಟಡವನ್ನು ಶಾಸಕ ಎ. ಮಂಜು ಉದ್ಘಾಟಿಸಿದರು. ಸಂಗೀತಾ ಮಂಜುನಾಥ, ಮಹೇಶ್, ರವಿಕುಮಾರ್ ಇತರರಿದ್ದರು.
Published on

ಅರಕಲಗೂಡು: ಚುನಾಯಿತ ಪ್ರತಿನಿಧಿಗಳು ಪ್ರತಿ ಹಳ್ಳಿಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಪರ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಹನ್ಯಾಳು ಗ್ರಾಮದಲ್ಲಿ ಸೋಮವಾರ ನೂತನ ಗ್ರಾಪಂ ಕಟ್ಟಡದ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಂತಿದ್ದು ಜನಪರ ಕಾರ್ಯಗಳನ್ನು ಕೈಗೊಂಡು ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡಬೇಕು. ಸ್ಥಳೀಯವಾಗಿ ಅಧಿಕಾರಿಗಳ ಸಮಸ್ಯೆಗಳನ್ನು ನಿರ್ಲರ್ಕ್ಷಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಸಂಗೀತ ಮಂಜುನಾಥ ಮಾತನಾಡಿ, ನೂತನ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 20 ಲಕ್ಷ ರೂ ಅನುದಾನ ನೀಡಿದ್ದು ನರೇಗಾ ಯೋಜನೆಯಡಿ 16 ಲಕ್ಷ ರೂ ವ್ಯಯಿಸಲಾಗಿದೆ. ಕಾಂಪೌಂಡ್ ನಿರ್ಮಾಣಕ್ಕೆ ಶಾಸಕರು ಅನುದಾನ ನೀಡುವಂತೆ ಮನವಿ ಮಾಡಿದರು.

ಗ್ರಾಪಂ ಉಪಾಧ್ಯಕ್ಷ ಎಂ.ಬಿ. ಮಹೇಶ್, ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾದ ಎಸ್. ಮಂಜುನಾಥ್, ಎಚ್.ಎಸ್. ವೇಣುಗೋಪಾಲ್, ಪಾರ್ವತಮ್ಮ ರಮೇಶ್, ಅನುಸೂಯ ಸ್ವಾಮಿಗೌಡ, ಸೋಂಪುರ ರಾಮಯ್ಯ, ಮಲ್ಲಾಪುರ ರಾಮಯ್ಯ, ಭಾಗ್ಯಮ್ಮ ರಮೇಶ್, ಸುನಂದಾ ಜಿ.ಸುಲೇಂದ್ರ, ರೋಜಾ ಕೃಷ್ಣಮೂರ್ತಿ, ಪಿಡಿಒ ಎಸ್.ಬಿ. ರವಿಕುಮಾರ್, ಕಾರ್ಯದರ್ಶಿ ಎನ್.ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net