

ರಾಣೆಬೆನ್ನೂರ: ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಕನ್ನಡ ಭಾಷೆ ಉಸಿರುಗಟ್ಟುವ ವಾತಾವರಣಕ್ಕೆ ಸಿಲುಕಿದ್ದು ಖೇದದ ಸಂಗತಿಯಾಗಿದೆ. ಆದ್ದರಿಂದ ಇಂದಿನ ದಿನಮಾನದಲ್ಲಿ ಮಕ್ಕಳಿಗೆ ತಾಯಿ ಭಾಷೆಯಿಂದಲೇ ಶಿಕ್ಷಣ ನೀಡುವ ಅಗತ್ಯವಿದೆ ಎಂದು ವಕೀಲ ಪರಮೇಶ್ವರಗೌಡ ಹಿರೇಗೌಡರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕಸಾಪ ತಾಲೂಕು ಟಕ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ವತಿಯಿಂದ ಬುಧವಾರ ಸಂಜೆ ಏರ್ಪಡಿಸಿದ್ದ ದಿ. ಪರಮೇಶಪ್ಪ ಹೂಲಿಹಳ್ಳಿ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾತೃ ಭಾಷೆ ಕನ್ನಡವನ್ನು ಬಳಸುವ, ಬೆಳೆಸುವ ಹಾಗೂ ಉಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಎಲ್ಲ ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಜ್ಞಾನ ವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಶಾರದಾ ನೃತ್ಯಾಲಯ ಸಂಸ್ಥೆಯ ಅಧ್ಯಕ್ಷ ಪರಶುರಾಮ ಸವಣೂರ ಕಾರ್ಯಕ್ರಮ ಉದ್ಘಾಟಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಪ್ರಭಾಕರ ಶಿಗ್ಲಿ, ಈರಯ್ಯ ಮಠಪತಿ, ಶ್ರೀನಿವಾಸ ನಲವಾಗಲ, ಮಂಜು ನಾಯ, ಮನೋಜಕುಮಾರ ಅಂಗಡಿ, ಜಗದೀಶ ಮಳಿಮಠ, ವೆಂಕಟೇಶ ಈಡಿಗರ, ಚಂದ್ರಶೇಖರ ಮಡಿವಾಳರ, ಶೋಭಾ ನಾಗನಗೌಡ್ರ, ಡಾ. ಕಾಂತೇಶ ಅಂಬಿಗೇರ, ಎಸ್.ಜಿ. ನಾಗನಗೌಡ್ರ, ವಿದ್ಯಾವತಿ ಮಳಿಮಠ, ಮಂಜುಳಾ ಸವಣೂರು, ವಿಜಯಲಕ್ಷಿ$್ಮ ಮಠದ ಮತ್ತಿತರರು ಉಪಸ್ಥಿತರಿದ್ದರು.