ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಆಹಾರ ನೀಡಿ

15KMD-1
ಕೆ.ಎಂ.ದೊಡ್ಡಿಯ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಮಾಂಟೆಸ್ಸರಿ ಮಕ್ಕಳಿಗೆ ಘಟಿಕೋತ್ಸವ ಸಮಾರಂಭದಲ್ಲಿ ಚಿಣ್ಣರು ಮತ್ತು ಗಣ್ಯರು ಭಾಗವಹಿಸಿದ್ದರು.
Published on

ಕೆ.ಎಂ.ದೊಡ್ಡಿ: ಪಾಲಕರು ಮಕ್ಕಳಿಗೆ ಜಂಕ್ ಫುಡ್ ನೀಡುವುದರಿಂದ ಅವರ ಆರೋಗ್ಯದ ಸಮತೋಲನೆಯಲ್ಲಿ ವ್ಯತ್ಯಾಸ ಕಾಣಲಿದ್ದು ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ನೀಡುವಂತೆ ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಪ್ರಸನ್ನಕುಮಾರ್ ಸಲಹೆ ನೀಡಿದರು.

ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಮಾಂಟೆಸ್ಸರಿ ಮಕ್ಕಳಿಗೆ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಂಕ್ ಫುಡ್‌ಗಳು ಸಹ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು ಪಾಲಕರು ಮಕ್ಕಳಿಗೆ ಪೌಷ್ಟಿಕ ಆಹಾರದತ್ತ ಗಮನ ಹರಿಸಿ ಸೊಪ್ಪು ತರಕಾರಿಗಳನ್ನು ಹೆಚ್ಚು ನೀಡಬೇಕು ಎಂದರು.

ಮಕ್ಕಳಿಗೆ ಶಿಕ್ಷಕರು ಶಾಲೆಯಲ್ಲಿ ವಿದ್ಯೆ ಕಲಿಸಿದರೆ ಪಾಲಕರು ಮನೆಯಲ್ಲಿ ಅವರ ಆಹಾರ ಪಧ್ಧತಿಯ ಬಗ್ಗೆ ಎಚ್ಚರ ವಹಿಸುವುದರ ಜತೆಗೆ ಉತ್ತಮ ವಾತವಾರಣದಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಉಮಾ ದೇವರಾಜು ಮಾತನಾಡಿ, ಮಕ್ಕಳ ಶೇ.90 ರಷ್ಟು ಬುದ್ಧಿ ಬೆಳವಣಿಗೆ ಆಗುವುದು ಎರಡು ವರ್ಷದಿಂದ. ಆರು ವರ್ಷದಲ್ಲಿ ಆ ಅವಧಿಯಲ್ಲಿ ಉನ್ನತ ಚಟುವಟಿಕೆ ನೀಡುವುದರಿಂದ ಅವರ ಬುದ್ಧಿಮಟ್ಟವು ಉತ್ತಮವಾಗಿ ಬೆಳೆಯುತ್ತದೆ. ಹಾಗಾಗಿ ಪಾಲಕರು ಈ ಸಮಯದಲ್ಲಿ ಉತ್ತಮ ವಾತಾವರಣವನ್ನು ಒದಗಿಸಬೇಕು ಎಂದರು.

ಮಕ್ಕಳು ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ರೀತಿಯ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿ ಪ್ರೇಕ್ಷಕರ ಗಮನ ಸೆಳೆದರು. ಈ ವೇಳೆ ಹಿರಿಯ ವಿದ್ಯಾರ್ಥಿಗಳು ವಿವಿಧ ರೀತಿಯ ಮನರಂಜನೆ ನೀಡಿ, ರಂಜಿಸಿದರು.

ಶಾಲೆಯ ಪ್ರಾಂಶುಪಾಲೆ ಸಿ.ರಮ್ಯಾ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಆಡಳಿತಾಧಿಕಾರಿ ಎಚ್.ಪಿ.ಪ್ರತಿಮಾ, ಶಿಕ್ಷಕರಾದ ಜಿ.ಬಿ. ನಂದಾ ಕೆ.ರಶ್ಮಿ, ಉಮೇಜೋಯಾ, ಹನ್ನ, ಜೆನ್ನಿ, ಸಿಂಧೂ, ಸುರಭಿ, ಭವ್ಯಾ, ಅಭಿಲಾಷಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net