ಮಕ್ಕಳಿಗೆ ಶುಚಿ-ರುಚಿ ಆಹಾರ ನೀಡಿ

food training
ಸಾಗರದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿ ಮಾತನಾಡಿದರು. ಶಿವಪ್ರಕಾಶ್, ಪರಶುರಾಮಪ್ಪ, ಡಾ. ಅನ್ನಪೂರ್ಣ, ಭೂಮೇಶ್ ಇತರರಿದ್ದರು.
Published on

ಸಾಗರ: ಶುಚಿ-ರುಚಿಯಾದ ಆಹಾರವನ್ನು ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ನೌಕರರ ಕೆಲಸ ಸಾರ್ಥಕವಾದುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಅಜಿತ ಸಭಾಭವನದಲ್ಲಿ ಶನಿವಾರ ತಾಲೂಕು ಪಂಚಾಯಿತಿ ಮತ್ತು ಅಕ್ಷರ ದಾಸೋಹದಿಂದ ಆಯೋಜಿಸಿದ್ದ ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜತೆ ಆಹಾರವೂ ಮುಖ್ಯ. ಅಕ್ಷರ ದಾಸೋಹ ಸರ್ಕಾರದ ಅತಿಮುಖ್ಯವಾದ ಯೋಜನೆ. ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಗೊಳಿಸುವಲ್ಲಿ ನಿಮ್ಮ ಪಾತ್ರ ಪ್ರಮುಖವಾದುದು ಎಂದರು.

ಅಡುಗೆ ಮಾಡುವಾಗ ಶುಚಿ-ರುಚಿ ಪಾಲನೆ ಮಾಡುವ ಜತೆಗೆ ಮಕ್ಕಳು ಅಡುಗೆ ತಯಾರಿಸುವ ಜಾಗದಲ್ಲಿ ಬಾರದಂತೆ ಗಮನವಹಿಸಬೇಕು. ನೀವು ಸಹ ಹೆಚ್ಚು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಅಡುಗೆಯವರದು ಸಾಕಷ್ಟು ಸಮಸ್ಯೆಗಳಿವೆ. ಅದನ್ನು ನನ್ನ ಗಮನಕ್ಕೂ ಕಾಲಕಾಲಕ್ಕೆ ತಂದಿದ್ದೀರಿ. ನಿಮ್ಮ ಧ್ವನಿಯಾಗಿ ಸರ್ಕಾರದ ಜತೆ ಮಾತುಕತೆ ನಡೆಸುತ್ತೇನೆ. ನಿಮಗೆ ವಹಿಸಿರುವ ಹೊಣೆಗಾರಿಕೆ ಜವಾಬ್ದಾರಿಯಿಂದ ನಿಭಾಯಿಸಿ ಎಂದು ತಿಳಿಸಿದರು.

ತಾಪಂ ಇಒ ಶಿವಪ್ರಕಾಶ್, ಬಿಇಒ ಪರಶುರಾಮಪ್ಪ, ಸಮನ್ವಯಾಧಿಕಾರಿ ಡಾ. ಅನ್ನಪೂರ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್, ಕೆ.ಜಗನ್ನಾಥ್, ಪರಮೇಶ್ವರ ಹೊಸಕೊಪ್ಪ, ಶೋಭಾ, ವಿ.ಟಿ.ಸ್ವಾಮಿ, ಎಚ್.ಬಿ.ದಿನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net