

ನವದೆಹಲಿ: ಜನರು ಮಳೆಯಲ್ಲಿ ನೃತ್ಯ ಮಾಡುವ ವಿಡಿಯೋಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ ಹಿಟ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳಂತೂ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಯುವತಿಯೊಬ್ಬಳು ಮಳೆಯಲ್ಲಿ ಬೆಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ.
90 ರ ದಶಕದ ಸೂಪರ್ ಹಿಟ್ ಸಾಂಗ್...'ಟಿಪ್ ಟಿಪ್ ಬರ್ಸಾ ಪಾನಿ' ಹಾಡಿಗೆ ಆಕೆ ಹೆಜ್ಜೆ ಹಾಕಿದ್ದು, ಅವಳ ನೃತ್ಯ ಕೌಶಲಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋವನ್ನು 'ಝಾಯೆಶಾ' ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಯುವತಿ ಬೆಲ್ಲಿ ಡ್ಯಾನ್ಸ್ ಪ್ರದರ್ಶನ ಮಾಡಿರುವುದನ್ನು ಕಾಣಬಹುದು. ಆಕೆಯ ವೇಷಭೂಷಣ, ಅಭಿನಯ ಹಾಡಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಮಳೆ ಬೀಳುತ್ತಿರುವಾಗ ಮೇಲ್ಛಾವಣಿಯಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ಡಾನ್ಸ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಜನರು ಆಕೆಯ ಅಭಿವ್ಯಕ್ತಿ ಇಷ್ಟಪಟ್ಟಿದ್ದು, ಪೋಸ್ಟ್ ಕಾಮೆಂಟ್‌ಗಳೊಂದಿಗೆ ತುಂಬಿ ಹೋಗಿದೆ.
ನೆಟ್ಟಿಗರು "ಅದ್ಭುತ ನೃತ್ಯ'', "ನಾನು ನಿಮ್ಮಂತೆಯೇ ನೃತ್ಯ ಮಾಡಬೇಕೆಂದು ಬಯಸುತ್ತೇನೆ," "ಗಾರ್ಜಿಯಸ್," "ದಯವಿಟ್ಟು ಅಗಾ ಬಾಲ್ ಹಾಡಿನಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿ", "ತುಂಬಾ ಉತ್ತಮ ನೃತ್ಯ... ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ'' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು "ಬೆಳಕನ್ನು ಸುಧಾರಿಸಿ, ಸ್ವಲ್ಪ ಹೆಚ್ಚು ಕ್ಲೋಸ್ ಅಪ್ ಮಾಡಿ. ವಿಡಿಯೋ ಸ್ಪಷ್ಟವಾಗಿ ಕಾಣುತ್ತಿಲ್ಲ'' ಎಂದೆಲ್ಲಾ ಸಲಹೆ ನೀಡಿದ್ದಾರೆ.
'ಟಿಪ್ ಟಿಪ್ ಬರ್ಸಾ ಪಾನಿ' 90 ರ ದಶಕದ ಮೊಹ್ರಾ ಚಲನಚಿತ್ರದ ಹಿಟ್ ಹಾಡು. ಇದರಲ್ಲಿ ನಟರಾದ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.