ಹುಡುಗಿಯರ ಅಶ್ಲೀಲ​ ಚಾಟ್​, ಹುಡುಗರ ದೇಹದ ಬಗ್ಗೆ ಮಾತು; ಸ್ಕ್ರೀನ್​ ಶಾಟ್​ ನೋಡಿ ಹೌಹಾರಿದ ನೆಟ್ಟಿಗರು..!

Instagram 6 May 20
Published on

ನವದೆಹಲಿ: ಎರಡು ದಿನಗಳ ಹಿಂದೆ ಟ್ವಿಟರ್​ನಲ್ಲಿ Boys Locker Room ಎಂಬ ಹ್ಯಾಷ್​ಟ್ಯಾಗ್​ ಸಿಕ್ಕಾಪಟೆ ಟ್ರೆಂಡ್​ ಆಗಿತ್ತು.

ದೆಹಲಿಯ ಪ್ರತಿಷ್ಠಿತ ಶಾಲೆಗಳ ಗಂಡುಮಕ್ಕಳು ಇನ್ಸ್ಟಾಗ್ರಾಂ ಗ್ರೂಪ್​ ರಚಿಸಿಕೊಂಡು, ಅದರಲ್ಲಿ ಚರ್ಚೆ ಮಾಡುತ್ತಿದ್ದ ಅಶ್ಲೀಲ ವಿಚಾರಗಳ ಸ್ಕ್ರೀನ್​ ಶಾಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಹಾಗೇ ದೆಹಲಿ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆ ಗ್ರುಪ್​​ನ್ನು ಡಿ ಆ್ಯಕ್ಟಿವೇಟ್ ಮಾಡಿದ್ದರು.

ಈ ಹುಡುಗರು, ರೇಪ್​, ಸೆಕ್ಸ್​, ಮಹಿಳೆಯರ ನಗ್ನ ದೇಹಗಳ ಫೋಟೋ ಹಾಕಿ ಅಶ್ಲೀಲವಾಗಿ ಚಾಟ್​ ಮಾಡಿದ್ದ ಸ್ಕ್ರೀನ್​ ಶಾಟ್​ನ್ನು ಹುಡುಗಿಯೋರ್ವಳು ಮೊದಲು ಪೋಸ್ಟ್ ಮಾಡಿ, ಗಮನ ಸೆಳೆದಿದ್ದಳು. ಅದಾದ ಬಳಿಕ ಬಾಯ್ಸ್​ ಲಾಕರ್​ ರೂಂ ಎಂಬ ಹ್ಯಾಷ್​ಟ್ಯಾಗ್​ನಡಿ ಇನ್ನೂ 18 ವಯಸ್ಸು ತುಂಬದ ಹುಡುಗರಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಜಾಡಿಸಿದ್ದರು.

ಆದರೆ ಇವತ್ತು ಒಂದು ಶಾಕಿಂಗ್​ ವಿಚಾರ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಬರಿ ಹುಡುಗರಷ್ಟೇ ಅಲ್ಲ, 15-18 ವಯಸ್ಸಿನ ಹುಡುಗಿಯರೂ ಆನ್​ಲೈನ್​ ಗ್ರುಪ್​ ಕ್ರಿಯೇಟ್​ ಮಾಡಿಕೊಂಡು ಅಷ್ಟೇ ಕೆಟ್ಟದಾಗಿ ಚಾಟ್ ಮಾಡಿದ್ದಾರೆ. ಅದೀಗ Girl's Locker Room ಎಂಬ ಹ್ಯಾಷ್​ಟ್ಯಾಗ್​ನಡಿ ಟ್ರೆಂಡ್​ ಆಗಿದೆ.

ಈ ಹುಡುಗಿಯರ ಗ್ರುಪ್​​ನಲ್ಲೂ ಕೂಡ ಸೆಕ್ಸ್​, ಗಂಡು ಹುಡುಗರ ದೇಹ, ಮೈಕಟ್ಟಿನಂತಹ ವಿಷಯಗಳೇ ಚರ್ಚೆಯಾಗಿವೆ. ಇದರ ಸ್ಕ್ರೀನ್​ ಶಾಟ್​ಗಳು Girl's Locker Room ಹ್ಯಾಷ್​​ಟ್ಯಾಗ್​ನಡಿ ಟ್ವಿಟರ್​ನಲ್ಲಿ ಹರಿದಾಡುತ್ತಿವೆ.

ಹುಡುಗಿಯರ ಈ ಅಶ್ಲೀಲ ಚಾಟ್​​ಗಳನ್ನು ನೋಡಿದ ಟ್ವಿಟ್ಟಿಗರು ಹೌಹಾರಿದ್ದಾರೆ. ಇದೊಂದು ತೀರ ಅಸಹ್ಯ. ಇಂತಹ ವಿಚಾರಗಳಲ್ಲಿ ನಾವು ಹುಡುಗರು, ಹುಡುಗಿಯರು ಎಂದು ಯಾರೊಬ್ಬರನ್ನೂ ದೂಷಿಸಲಾಗುವುದಿಲ್ಲ. ಇವರೆಲ್ಲರೂ ನಮ್ಮ ಸಮಾಜಕ್ಕೆ ವಿಷಬೀಜಗಳಿದ್ದಂತೆ ಎಂದು ನೆಟ್ಟಿಗರೋರ್ವರು ಕಿಡಿಕಾರಿದ್ದಾರೆ.

ಹಾಗೇ, ಹುಡುಗರ ಅಶ್ಲೀಲ ಚಾಟ್​ಗಳು ಬೆಳಕಿಗೆ ಬರುತ್ತಿದ್ದಂತೆ ದೆಹಲಿ ಮಹಿಳಾ ಆಯೋಗ ಕ್ರಮಕ್ಕೆ ಒತ್ತಾಯಿಸಿತ್ತು. ಈಗಲೂ ಸಹ ಮಹಿಳಾ ಆಯೋಗ ಹುಡುಗಿಯರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net