ಮದುವೆಗೆ ಹೊರಟಿದ್ದವಳು ಕಾಡು ಸೇರಿದಳು; 14 ದಿನ ರೇಪ್​ ಮಾಡಿದ ಕಾಮುಕ!

stop rape
Published on

ಜೈಪುರ: ಯಾರಾದರೂ ಅಪರಿಚಿತರು ಡ್ರಾಪ್​ ಕೊಡುತ್ತೇವೆಂದರೆ, ಸುಮ್ಮನೆ ಹತ್ತಿ ಕುಳಿತುಬಿಡಬಾರದು ಎಂದು ತಿಳಿದವರು ಹೇಳುತ್ತಲೇ ಇರುತ್ತಾರೆ. ಆದರೆ ನಮ್ಮ ಮಂಕುಬುದ್ಧಿಯಿಂದ ಮಾಡುವ ತಪ್ಪುಗಳು ಅದೆಂಥಹ ಅನಾಹುತಗಳನ್ನು ಉಂಟು ಮಾಡಿಬಿಡುತ್ತವೆ ಅಂದರೆ, ಮುಂದೆ ಅದರಿಂದ ಹೊರಬರಲು ಸಾಧ್ಯವೇ ಇಲ್ಲದ ಹಂತಕ್ಕೆ ನಾವು ಹೋಗಿಬಿಡುತ್ತೇವೆ. ಅಂತದ್ದೇ ಒಂದು ಅನಾಹುತ ರಾಜಸ್ಥಾನದ 20 ವರ್ಷಯ ಯುವತಿಯ ಬಾಳಿನಲ್ಲಿ ನಡೆದುಹೋಗಿದೆ.

ನವೆಂಬರ್​ 9ರಂದು ತನ್ನ ಸಂಬಂಧಿಯ ಮದುವೆಯಿದ್ದ ಹಿನ್ನೆಲೆಯಲ್ಲಿ ಯುವತಿ ಅಂದವಾಗಿ ರೆಡಿಯಾಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಳಂತೆ. ಆಗ ಆಕೆಯ ಎದುರಿಗೆ ಬೈಕ್​ ಒಂದು ಬಂದು ನಿಂತಿದೆ. ಡ್ರಾಪ್​ ನೀಡುವುದಾಗಿ ಬೈಕ್​ನಲ್ಲಿದ್ದ ಯುವಕ ಹೇಳಿದ್ದಾನೆ. ಆಕೆ ಒಪ್ಪದಿದ್ದರೂ ತಾನೇ ಆಕೆಯನ್ನು ಎಳೆದು ಕೂರಿಸಿಕೊಂಡು ವೇಗವಾಗಿ ಬೈಕ್​ ಓಡಿಸಿದ್ದಾನೆ.

ಈ ರೀತಿ ಯುವತಿಯನ್ನು ಬೈಕ್​ನಲ್ಲೇ ಅಪಹರಣ ಮಾಡಿದ ಯುವಕ, ಆಕೆಯನ್ನು ಕಾಡೊಂದರೊಳಗಿದ್ದ ಗುಡಿಸಲಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯನ್ನು ಹಗ್ಗದಿಂದ ಕಟ್ಟಿ ಹಾಕಿ ಸತತ 14 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. 14 ದಿನಗಳ ನಂತರ ಅಂದರೆ ನವೆಂಬರ್​ 22ರಂದು ಯುವತಿ ಕಷ್ಟ ಪಟ್ಟು ಹಗ್ಗವನ್ನು ಬಿಡಿಸಿಕೊಂಡಿದ್ದಾಳೆ. ಆತ ಗುಡಿಸಲಿನಲ್ಲಿ ಇಲ್ಲದ ಸಮಯ ಕಂಡು ಅಲ್ಲೇ ಇದ್ದ ಮೊಬೈಲ್​ನಿಂದ ತನ್ನ ತಂದೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಪೊಲೀಸರ ಸಹಾಯದೊಂದಿಗೆ ಯುವತಿಯನ್ನು ರಕ್ಷಿಸಲಾಗಿದೆ. ಈ ವಿಚಾರವಾಗಿ ಯುವತಿ ಪೊಲೀಸ್​ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net