ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ ಅಣ್ಣನಿಂದಲೇ ಅತ್ಯಾಚಾರ! girl raped by her brother

rape-cartoon
ಸಾಂದರ್ಭಿಕ ಚಿತ್ರ
Published on

ತಿರುಪತಿ: ಆಧ್ರದ ಅಲಿಪಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿ ಮೇಲೆ ಆಕೆಯ ದೊಡ್ಡ್ಮನ ಮಗನೇ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. girl raped by her brother

ಬೆಂಗಳೂರಿಗೆ ವಲಸೆ ಕೂಲಿಯಾಗಿ ಹೋಗಿದ್ದ ಮಹಿಳೆಯೊಬ್ಬರು ಮಗಳನ್ನು ತನ್ನ ತಾಯಿ ಮತ್ತು ಅಕ್ಕನಿದ್ದ ಮನೆಯಲ್ಲಿ ಇರಿಸಿದ್ದರು. ಬಾಲಕಿ 8ನೇ ತರಗತಿ ಓದುತ್ತಿದ್ದಾಳೆ. ಆದರೆ ಆಕೆಯ ದೊಡ್ಡಮ್ಮನ ಮಗ ಹೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ.

ಕಾಮಾಂದ ಸಹೋದರ ಕಳೆದ ಫೆಬ್ರವರಿಯಿಂದ ಹಲವು ಬಾರಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಮನೆಯಲ್ಲಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಸಂತ್ರಸ್ತೆಯ ತಾಯಿ ವಿನಾಯಕ ಚವಿತಿ ಹಬ್ಬದ ನಿಮಿತ್ತ ಬೆಂಗಳೂರಿನಿಂದ ಮನೆಗೆ ಬಂದಿದ್ದಾಗ ತಾಯಿಯನ್ನು ನೋಡಿದ ಬಾಲಕಿ ಇದ್ದಕ್ಕಿದ್ದಂತೆ ಅಳುತ್ತಾ ಆಕೆಗೆ ನಡೆದ ದೌರ್ಜನ್ಯವನ್ನು ವಿವರಿಸಿದ್ದಾಳೆ.

ಕಳೆದ ಎಂಟು ತಿಂಗಳಿಂದ ಅಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಹೇಳಿದ್ದಾಳೆ. ಇಬ್ಬರೂ ಶನಿವಾರ ರಾತ್ರಿ ಅಲಿಪಿರಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅತ್ಯಾಚಾರದ ಬಗ್ಗೆ ದೂರು ನೀಡಿದ್ದಾರೆ. ಘಟನೆ ಕುರಿತು ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net