ಚಲಿಸುತ್ತಿದ್ದ ಬಸ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ! molested a woman in bus

rape
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್: ಹೈದರಾಬಾದ್​ನಲ್ಲಿ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಟ್ರಾವೆಲ್‌ ಬಸ್‌ನಲ್ಲಿ ವಿವಾಹಿತೆ ಮೇಲೆ ಅತ್ಯಾಚಾರ ಎಸಗಿದ್ದು, ಘಟನೆ ಸಂಚಲನ ಮೂಡಿಸಿದೆ. molested a woman in bus

ಸೆಪ್ಟೆಂಬರ್ 18ರಂದು ನಡೆದ ಈ ದುಷ್ಕೃತ್ಯ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಮಹಿಳೆ(28) ಕುಕಟ್‌ಪಲ್ಲಿಯಿಂದ ವಿಜಯವಾಡಕ್ಕೆ ತೆರಳಲು ಖಾಸಗಿ ಟ್ರಾವೆಲ್‌ ಬಸ್‌ ಹತ್ತಿದ್ದರು. ರಾತ್ರಿಯ ಸಮಯವಾದ್ದರಿಂದ ಇತರೆ ಪ್ರಯಾಣಿಕರು ನಿದ್ರೆಗೆ ಜಾರಿದ್ದರು. ಆಗ ಅದೇ ಬಸ್ಸಿನಲ್ಲಿ ಪ್ರವಾಣಿಸುತ್ತಿದ್ದ ಕಾಮಾಂದನೊಬ್ಬನ ಕಣ್ಣಿಗೆ ನಿದ್ರೆಗೆ ಜಾರಿದ್ದ ಈ ಮಹಿಳೆ ಬಿದ್ದಿದ್ದಾಳೆ. ಕೂಡಲೇ ಜಾಗೃತನಾದ ಕಾಮಿ ಮೆಲ್ಲಗೆ ಆಕೆ ಪಕ್ಕಕ್ಕೆ ಬಂದಿದ್ದಾನೆ. ಕಿರುಚಿದರೆ ಸಾಯಿಸುತ್ತೇನೆ ಎಂದು ಪಿಸುಗುಟ್ಟಿ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪತಿ ಗಮನಕ್ಕೆ ತಂದ ಮಹಿಳೆ:

ಮನೆಗೆ ಹೋದ ನಂತರ ತನಗೆ ನಡೆದ ಘೋರ ಘಟನೆಯನ್ನು ಆಕೆ ಪತಿಗೆ ತಿಳಿಸಿದ್ದಾಳೆ. ನಂತರ ಪತಿ-ಪತ್ನಿ ಸೆ.22(ಭಾನುವಾರ) ಚೌಟುಪ್ಪಳ ಪೊಲೀಸ್​ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಇದರಿಂದ ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ.

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಚೌಟುಪ್ಪಲ್ ಪೊಲೀಸರು ಕುಕಟ್‌ಪಲ್ಲಿಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. ಸಂತ್ರಸ್ತೆ ನೀಡಿರುವ ವಿವರಗಳ ಪ್ರಕಾರ ಬಸ್ ನಲ್ಲಿ ಪ್ರಯಾಣಿಸಿದವರ ವಿವರ ಸಂಗ್ರಹಿಸಲಾಗುತ್ತಿದೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net