VIDEO | ರೀಲ್ಸ್​ ಮೋಜು; ಜಲಾವೃತಗೊಂಡ ರಸ್ತೆಯಲ್ಲಿ ಡ್ಯಾನ್ಸ್​ ಮಾಡಿದ ಯುವತಿ!

Untitled design - 2023-07-26T203701.838
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ವಿಡಿಯೋವನ್ನು ಪೋಸ್ಟ್​ ಮಾಡಿದರೆ ನಮಗೆ ಹೆಚ್ಚು ಫಾಲೋವರ್ಸ್​, ಅಧಿಕ ಲೈಕ್ಸ್​ ಸಿಗುತ್ತದೆ ಎಂಬ ಗೀಳಿಗೆ ಬಿದ್ದು ಹಲವರು ವಿಭಿನ್ನ ಪ್ರಯತ್ನ ಮಾಡುವಲ್ಲಿ ಇದೀಗ ಮುಂದಿದ್ದಾರೆ. ಅದೇ ರೀತಿಯ ಘಟನೆಯೊಂದು ಇಲ್ಲಿ ನಡೆದಿದ್ದು, ಯುವತಿಯೊಬ್ಬಳು ಇನ್​ಸ್ಟಾಗ್ರಾಮ್​ ರೀಲ್ಸ್​ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಮಳೆಯಿಂದ ಜಲಾವೃತಗೊಂಡ ರಸ್ತೆಯ ಮಧ್ಯೆದಲ್ಲಿ ನಿಂತು ತನಗೆ ಬೇಕಾದ ಹಾಡಿಗೆ ಡ್ಯಾನ್ಸ್​ ಮಾಡುವ ಮುಖೇನ ರೀಲ್ಸ್​ ಮಾಡಿದ್ದಾಳೆ. ಈ ವಿಡಿಯೋವನ್ನು ತನ್ನ ಖಾತೆಯಲ್ಲಿ ಪೋಸ್ಟ್​ ಮಾಡಿದ ಬಳಿಕ ನೆಟ್ಟಿಗರು ಯುವತಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ರೀಲ್ಸ್​ ಮಾಡುವ ಮೋಜಿಗೆ ಬಿದ್ದು ಇಂದಿನ ಯುವ ಜನತೆ ಹಾಳಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವ ಅಗತ್ಯವೇನು? ಇಂಥ ಚಟುವಟಿಕೆಗಳಿಗೆ ಬ್ರೇಕ್​ ಬೀಳಬೇಕು ಎಂದು ಹಲವರು ಕಾಮೆಂಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net