

ಅಮೆರಿಕಾ: ಬಹುಭಾಷಾ ನಟ ಕಮಲ್ ಹಾಸನ್ ಅವರು ಇದೀಗ ಟಾಪ್ ನಟರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, 'ಇಂಡಿಯನ್ 2' ಮತ್ತು ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅಮೆರಿಕಾಗೆ ತೆರಳಿದ ಅವರು ಆಸ್ಕರ್ ವಿಜೇತ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದಾರೆ.
'ಅವ್ವೈ ಷಣ್ಮುಗಿ' ಮತ್ತು 'ದಶಾವತಾರಂ' ಚಿತ್ರಗಳಲ್ಲಿ ತಮ್ಮ ವಿನ್ಯಾಸಕ್ಕಾಗಿ ಕೆಲಸ ಮಾಡಿದ ಆಸ್ಕರ್-ವಿಜೇತ ಅಮೇರಿಕನ್ ಮೇಕಪ್ ಕಲಾವಿದ ಮೈಕೆಲ್ ವೆಸ್ಟ್‌ಮೋರ್ ಅವರನ್ನು ಭೇಟಿ ಮಾಡಿ, ಉತ್ತಮ ಸಮಯ ಕಳೆದಿದ್ದಾರೆ. 40 ವರ್ಷಗಳಿಂದ ಪರಿಚಯವಿರುವ ಇಬ್ಬರು ಹಳೆಯ ಸ್ನೇಹಿತರಾಗಿದ್ದು, ಒಟ್ಟಿಗೆ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಸ್ನೇಹಿತ ಮೈಕೆಲ್ ವೆಸ್ಟ್‌ಮೋರ್ ಅವರನ್ನು ಭೇಟಿಯಾದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಮಲ್ ಹಾಸನ್ ಅವರ ಅಭಿಮಾನಿಗಳು ಈ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).