

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಹಾಗೂ ವಿಚಿತ್ರ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದು ಕ್ಷಣ ಮಾತ್ರದಲ್ಲಿ ವೈರಲ್ ಆಗಿಬಿಡುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಪಾರ್ಟಿಯೊಂದರಲ್ಲಿ ತನ್ನ ಬಾಯ್ಫ್ರೆಂಡ್ ಜತೆ ಡಿಜೆ ಸೌಂಡ್ಗೆ ಯುವತಿ ಡಾನ್ಸ್ ಮಾಡುತ್ತಿರುತ್ತಾಳೆ. ಈ ವೇಳೆ ಹಿಂದಿನಿಂದ ಬರುವ ಯುವಕ, ಯುವತಿಯ ಮುಂದೆ ನಿಂತು ಏನೋ ಹೇಳುತ್ತಾನೆ. ಬಳಿಕ ಇಬ್ಬರು ಪರಸ್ಪರ ಚುಂಬಿಸುತ್ತಾರೆ. ಆದರೆ, ಇಬ್ಬರು ಲಿಪ್ಲಾಕ್ ಮಾಡಿರುವುದು ಯುವತಿಯ ಬಾಯ್ಫ್ರೆಂಡ್ಗೆ ಗೊತ್ತಾಗುವುದೇ ಇಲ್ಲ. ಇದಿಷ್ಟು ದೃಶ್ಯ ವೈರಲ್ ವಿಡಿಯೋದಲ್ಲಿದೆ.
ಈ ವಿಡಿಯೋವನ್ನು @LadyLionSA ಹೆಸರಿನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಅದಕ್ಕೆ "ಸಹೋದರನಿಗೆ ಸಂದರ್ಭದ ಯಾವುದೇ ಅರಿವು ಇರಲಿಲ್ಲ" ಎಂದು ಅಡಿಬರಹವನ್ನು ನೀಡಲಾಗಿದೆ. ಅದರರ್ಥ ಬಾಯ್ಫ್ರೆಂಡ್ಗೆ ಅರಿವೇ ಇರಲಿಲ್ಲ ಎಂದು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಆಗಸ್ಟ್ 3ರಂದು ಅಪ್ಲೋಡ್ ಮಾಡಲಾಗಿದೆ. ಈವರೆಗೂ ಆ ವಿಡಿಯೋ 13. ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಅಂದರೆ, 1 ಕೋಟಿ 30 ಲಕ್ಷ ಮಂದಿ ಕೇವಲ ಎರಡು ದಿನಗಳಲ್ಲಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅಲ್ಲಿಗೆ ಈ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಎಂಬುದನ್ನು ನೀವೇ ಊಹಿಸಿ.
13 ಮಿಲಿಯನ್ ವೀಕ್ಷಣೆ ಮಾತ್ರವಲ್ಲದೆ, 14 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ, 2 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಮಾಡಿದ್ದರೆ, ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಕೋಟ್ ಮಾಡಿದ್ದಾರೆ. ವಿಡಿಯೋ ನೋಡಿದವರು ಬಗೆ ಬಗೆಯ ಕಾಮೆಂಟ್ ಹಾಗೂ ಎಮೋಜಿಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)