ಹಾಡಹಗಲೇ ವಿದ್ಯಾರ್ಥಿನಿ ಕಿಡ್ನ್ಯಾಪ್​! ಕಿಡಿಗೇಡಿಗಳನ್ನು ಹಿಡಿಯಲು ಸಿನಿಮೀಯ ಶೈಲಿಯಲ್ಲಿ 20 ಕಿ.ಮೀ ಚೇಸ್​ | Girl Kidnapped

ವಿಜಯವಾಣಿ (100)
Published on

Girl Kidnapped: ಹಾಡಹಗಲೇ ಪಿಯುಸಿ ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್​ ಮಾಡಿದ ಕಿಡಿಗೇಡಿಗಳ ಗ್ಯಾಂಗ್​, ಆಕೆಯನ್ನು ಬಲವಂತವಾಗಿ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯರನ್ನು ಭಯಬೀಳಿಸಿದ ಘಟನೆ ಮಧ್ಯಪ್ರದೇಶದ ಧರ್​ನಲ್ಲಿ ವರದಿಯಾಗಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಕಾಲೇಜು ವಿದ್ಯಾರ್ಥಿನಿ ಬಸ್​ಗಾಗಿ ಎಟಿಎಂ ಬಳಿ ನಿಂತಿದ್ದಳು. ಈ ವೇಳೆ ಏಕಾಏಕಿ ಆಕೆಯ ಬಳಿ ಬಂದ ಮಹೀಂದ್ರಾ ಬೊಲೆರೊ ಕಾರಿನಿಂದ ಮೂವರು ಕೆಳಗಿಳಿದು, ಹುಡುಗಿಯ ಬಾಯಿ ಮುಚ್ಚಿ, ವಾಹನಕ್ಕೆ ಬಲವಂತವಾಗಿ ಎಳೆದೊಯ್ದರು. ಪುರುಷರಿಂದ ಹಿಂಸೆಗೆ ಸಿಲುಕಿದ ವಿದ್ಯಾರ್ಥಿನಿ, ಸಹಾಯಕ್ಕಾಗಿ ಚೀರಾಡುತ್ತಿದ್ದಳು. ತಕ್ಷಣವೇ, ಅಲ್ಲಿದ್ದ ಸ್ಥಳೀಯರು ತಮ್ಮ ತಮ್ಮ ವಾಹನಗಳಲ್ಲಿ ಕಾರನ್ನು ಬೆನ್ನಟ್ಟಿದರು ಎನ್ನಲಾಗಿದೆ.

ಊರಿನವರು ಕಾರನ್ನು ಬೆನ್ನತ್ತಿದ ಕೂಡಲೇ 20 ಕಿ.ಮೀ ದೂರ ಮನಬಂದಂತೆ ಚಲಾಯಿಸಿಕೊಂಡು ಹೋದ ದುಷ್ಕರ್ಮಿಗಳು, ಮೇಕೆಗಳ ಗುಂಪಿಗೆ ಮತ್ತು ಅಡ್ಡಬಂದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಕೊನೆಗೆ ಗಾಡಿ ಕೆಟ್ಟು, ಬದಿಯಲ್ಲಿ ನಿಂತಾಗ ವಿದ್ಯಾರ್ಥಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿ ನೀಡಿರುವ ಮಾಹಿತಿಯ ಆಧಾರದ ಮೇರೆಗೆ ಅಪರಾಧಿಗಳನ್ನು ಗುರುತಿಸಲಾಗಿದೆ. ಮತ್ತು ಆ ಮೂವರನ್ನು ಬಂಧಿಸಲು ಪ್ರತ್ಯೇಕ ತಂಡಗಳನ್ನು ರಚಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಯಾಂಕ್ ಅವಸ್ಥಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net