ಬರ್ಗರ್ ಲವ್ ; ತನಗಿಂತ 20 ವರ್ಷ ಹಿರಿಯ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಯುವತಿ

burger love
Published on

ನವದೆಹಲಿ: ಪ್ರತಿಯೊಬ್ಬರೂ ಅವರು ಮೊದಲ ಬಾರಿಗೆ ಹೇಗೆ ಭೇಟಿಯಾದರು, ಅವರ ಮದುವೆಗೆ ಹೇಗೆ ಕಾರಣವಾಯಿತು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ನೀವೂ ಕೂಡ ಅನೇಕ ಜನರ ಇಂತಹ ಕಥೆಗಳನ್ನು ಕೇಳಿರಬಹುದು, ಆದರೆ ಪ್ರಸ್ತುತ ಅಂತಹ ಪ್ರೇಮಕಥೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದು ನೀವು ಹಿಂದೆಂದೂ ಕೇಳಿರದಿರಬಹುದು.

ಪಾಕಿಸ್ತಾನದಲ್ಲಿ ಯುವತಿಯೊಬ್ಬಳು ತನಗಿಂದ ಇಪ್ಪತ್ತು ವರ್ಷ ಹಿರಿಯ ವ್ಯಕ್ತಿಯ ಕೈ ಹಿಡಿದಿದ್ದಾಳೆ. ಆಕೆ ಆತನನ್ನು ಮದುವೆಯಾಗಲು ನೀಡಿದ ಕಾರಣ ಮಾತ್ರ ವಿಚಿತ್ರವಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹುಡುಗಿ ತನ್ನ ಲವ್ ಸ್ಟೋರಿ ಬಗ್ಗೆ ಹೇಳುತ್ತಿದ್ದಾಳೆ. ಅವಳು ಹೇಳುತ್ತಾಳೆ, 'ಅವನು ನನ್ನ ಮನೆಗೆ ಬಂದಾಗ, ನಾನು ಅವನನ್ನು ಅಣ್ಣ ಎಂದು ಕರೆಯುತ್ತಿದ್ದೆ. ಅವನು ನನ್ನ ಸೋದರ ಸಂಬಂಧಿ ಹಾಗಾಗಿ ನಾನು ಅವನನ್ನು ಖುರ್ರಂ ಭಾಯ್ ಎಂದು ಕರೆಯುತ್ತಿದ್ದೆ. ಆದರೆ ಅವರು ನನ್ನನ್ನು ಸಹೋದರ ಎಂದು ಕರೆಯ ಬೇಡಾ ಎಂದಿದ್ದಾರೆ.ಯಾಕೆ ಹೀಗೆ ಹೇಳುತ್ತಿದ್ದೀರಾ ಎಂದು ಪ್ರ್ನಶೆ ಮಾಡಿದ್ದಾಳೆ. ಆಗ ಅವರು ನಿಮಗೆ ಏನಾದರೂ ಬೇಕಾದರೆ ಹೇಳಿ, ನಾನು ಅದನ್ನು ತಂದುಕೊಡುತ್ತೇನೆಂದು ಹೇಳಿದ್ದಾನೆ.

ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫೋನ್ ಮಾಡಿದ ಯುವತಿ, ಷಾವರ್ಮಾ ತರುವಂತೆ ಹೇಳಿದ್ದಾಳೆ. ಆತ ಓಕೆ ಎಂದಿದ್ದಲ್ಲದೆ ಕೆಲವೇ ಸಮಯದಲ್ಲಿ ಷಾವರ್ಮಾ ತಂದಿದ್ದಾನೆ. ಜೊತೆಗೆ ಎರಡು ಶುಂಠಿ ಬರ್ಗರ್ ತಂದಿದ್ದಾನೆ. ಇದನ್ನು ತಿಂದಿದ್ದೇ ಯುವತಿ ಆತನಿಗೆ ಬಿದ್ದಿದ್ದೇನೆಂದು ಹೇಳಿದ್ದಾಳೆ. ಈ ವಿಡಿಯೋದಲ್ಲಿ ಯುವತಿ ತನ್ನ ಪ್ರೀತಿ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋವನ್ನು ಅನೇಕರು ವೀಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net