ಅಮ್ಮ ಮಾಡಿದ ತಾರತಮ್ಯದಿಂದಾಗಿ ಬಿತ್ತು ಮಗಳ ಹೆಣ; ಮದುವೆಗೆ ಹೋದವಳ ಮನೆ ಸ್ಮಶಾನವಾಯಿತು

hang
hang
Published on

ಮುಜಾಫರ್ನಗರ: ಚಿಕ್ಕ ಮಕ್ಕಳ ಹಠ ಕೆಲವೊಮ್ಮೆ ದೊಡ್ಡ ಅನಾಹುತಗಳಿಗೆ ಕಾರಣವಾಗಿಬಿಡುತ್ತದೆ. ದೂರದ ಸಂಬಂಧಿಯೊಬ್ಬರ ಮದುವೆಗೆ ಬರುತ್ತೇನೆಂದು ಹಠ ಹಿಡಿದ ಎಂಟು ವರ್ಷದ ಮಗಳು ಮಾಡಿಕೊಂಡ ಕೆಲಸ ಇದೀಗ ಪೂರ್ತಿ ಗ್ರಾಮವೇ ಬೆಚ್ಚಿಬೀಳುವಂತೆ ಮಾಡಿದೆ.

ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆ ನಿರ್ಧಾನ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇತ್ತೀಚೆಗೆ ಸಂಬಂಧಿಯೊಬ್ಬರ ಮದುವೆಗೆಂದು ಅಮ್ಮ ಹೊರಟಿದ್ದರು. ಎಂಟು ವರ್ಷದ ಮಗಳನ್ನು ಮನೆಯಲ್ಲೇ ಬಿಟ್ಟು ಆಕೆಯ ತಮ್ಮನನ್ನು ಮದುವೆಗೆ ಕರೆದುಕೊಂಡು ಹೋಗು ನಿರ್ಧಾರವನ್ನು ತಾಯಿ ಮಾಡಿದ್ದಾಳೆ. ಮಗಳು ಅದೆಷ್ಟೇ ಗೋಗರೆದರೂ ಕೇಳದೆ, ಅವಳನ್ನು ಮನೆಯಲ್ಲೇ ಬಿಟ್ಟು ಮದುವೆಗೆ ಹೋಗಿದ್ದಾಳೆ.

ಅಮ್ಮ ಮದುವೆಗೆ ನನ್ನ ಬಿಟ್ಟು ಹೋದಳು ಎನ್ನುವ ಕೋಪಕ್ಕೆ ಬಿದ್ದ ಬಾಲಕಿ ಮಾಡಬಾರದ ತಪ್ಪು ಮಾಡಿಬಿಟ್ಟಿದ್ದಾಳೆ. ಮನೆಯ ಬಾಗಿಲನ್ನು ಒಳಗಿನಿಂದ ಹಾಕಿಕೊಂಡು ಕೋಣೆಯ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆ ಮುಗಿಸಿಕೊಂಡು ಮನೆಗೆ ಬಂದ ಅಮ್ಮ, ಅದೆಷ್ಟೇ ಬಾಗಿಲು ತಟ್ಟಿದರೂ ಮಗಳು ಬಾಗಿಲು ತೆಗೆದಿಲ್ಲ. ಊರವರ ಸಹಾಯದಿಂದ ಬಾಗಿಲನ್ನು ಒಡೆದು ಒಳಗೆ ಹೋಗಲಾಗಿದೆ. ಆಗ ಮಗಳು ಶವವಾಗಿ ನೇಣಿನಲ್ಲಿ ನೇತಾಡುತ್ತಿರುವ ದೃಶ್ಯ ತಾಯಿಯ ಕಣ್ಣಿಗೆ ಕಂಡಿದೆ.

ಪೊಲೀಸರು ಸ್ಥಳಕ್ಕೆ ತಲುಪುವದರೊಳಗೆ ಬಾಲಕಿಯ ಅಂತ್ಯಸಂಸ್ಕಾರವನ್ನು ಮಾಡಿ ಮುಗಿಸಲಾಗಿತ್ತು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net