VIDEO | ಹೆಚ್ಚಾಯ್ತು ರೈಲಿನೊಳಗೆ ರೀಲ್ಸ್ ಮಾಡುವವರ​ ಹಾವಳಿ; ಯುವತಿಯ ಡ್ಯಾನ್ಸ್​ ನೋಡಿ ನೆಟ್ಟಿಗರು ಕೆಂಡಾಮಂಡಲ!

Untitled design - 2023-07-28T131851.746
Published on

ನವದೆಹಲಿ: ಇದು ಡಿಜಿಟಲ್ ಯುಗ ಎಂಬುದನ್ನು ಇಂದಿನ ಯುವ ಜನತೆ ಪದೇ ಪದೇ ತಮ್ಮ ಹುಚ್ಚಾಟಗಳಿಂದ ಸಾಬೀತುಪಡಿಸುತ್ತಿದ್ದಾರೆ. ಫೇಸ್​​ಬುಕ್​, ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಇದೀಗ ರೀಲ್ಸ್​ ಮಾಡಿ ಪೋಸ್ಟ್​ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಲೈಕ್ಸ್​, ಕಮೆಂಟ್​​ಗಳನ್ನು ಪಡೆಯುವ ಮೂಲಕ ನೆಟ್ಟಿಗರ ಗಮನ ಸೆಳೆಯುವ ಪ್ರಯತ್ನದಲ್ಲಿ ಇಂದಿನ ಯುವಕ-ಯುವತಿಯರು ಎಲ್ಲೆಂದರಲ್ಲಿ ರೀಲ್ಸ್ ಮಾಡಿ ಪೋಸ್ಟ್​ ಮಾಡುತ್ತಿದ್ದಾರೆ. ಅದರಲ್ಲೂ ಅತೀ ಮುಖ್ಯವಾಗಿ ಸಾರ್ವಜನಿಕರು ದಿನನಿತ್ಯ ಸಂಚರಿಸುವ ಮೆಟ್ರೋ ರೈಲಿನೊಳಗೆ ರೀಲ್ಸ್​ ಮಾಡುವವರ ಹಾವಳಿ ಅಧಿಕವಾಗಿದೆ. ಇದೇ ಸಾಲಿನಲ್ಲಿ ಇಲ್ಲೊಬ್ಬಳು ಯುವತಿ ರೈಲಿನೊಳಗೆ ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ನಡುವೆ ಡ್ಯಾನ್ಸ್​ ಮಾಡುವ ಮೂಲಕ ರೀಲ್ಸ್​ ಮಾಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ವಿಡಿಯೋಗೆ ಕಮೆಂಟ್​ ಮಾಡಿದ ನೆಟ್ಟಿಗರು, ರೈಲಿನ ಅಧಿಕಾರಿಗಳು ಇದೆಕ್ಕೆಲ್ಲಾ ಅನುಮತಿ ಕೊಡಬಾರದು, ಬದಲಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಇದು ನಡೆಯಬಾರದು ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net