ಪೊಲೀಸ್ ಸಿಬ್ಬಂದಿಯನ್ನು ಉತ್ತೇಜಿಸಲು ಬಾಡಿ ವೋರ್ನ್ ಕ್ಯಾಮೆರಾ ಧರಿಸಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್

Untitled design - 2023-07-28T122938.789
Published on

ಬೆಂಗಳೂರು: ಪೊಲೀಸ್ ಸಿಬ್ಬಂದಿಗೆ ಉತ್ತೇಜನ ನೀಡಲು ಬಾಡಿ ವೋರ್ನ್ ಕ್ಯಾಮೆರಾ ಧರಿಸಿದ ಬೆಂಗಳೂರು ಪೊಲೀಸ್​ ಕಮಿಷನರ್​ ಬಿ. ದಯಾನಂದ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕೂಡ ಬಾಡಿ ವೋರ್ನ್ ಕ್ಯಾಮೆರಾ ಧರಿಸುವಂತೆ ಆದೇಶ ನೀಡಿದ್ದಾರೆ.

ಹೊಯ್ಸಳ ಅಸಿಸ್ಟೆಂಟ್​ ಸಬ್​ ಇನ್ಸ್​ಪೆಕ್ಟರ್​​ ಸೇರಿದಂತೆ ಪೊಲೀಸ್​ ಅಧಿಕಾರಿಗಳು ಬಾಡಿ ವೋರ್ನ್ ಕ್ಯಾಮೆರಾ ಧರಿಸಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿದ್ದಾರೆ. ಗಲಭೆ, ಪ್ರತಿಭಟನೆ ಹಾಗೂ ಬೃಹತ್ ಕಾರ್ಯಕ್ರಮಗಳಲ್ಲಿ ಇನ್ಸ್‌ಪೆಕ್ಟರ್​ಗಳು ಈ ಕ್ಯಾಮೆರಾ ಧರಿಸುವಂತೆ ಹೇಳಿದ್ದಾರೆ.

ಈ ಆದೇಶ ಹೊರಡಿಸಲು ಮುಖ್ಯ ಉದ್ದೇಶ, ಕೆಳಹಂತದ ಸಿಬ್ಬಂದಿಗೆ ಉತ್ತೇಜನ ನೀಡಲು ಯೋಜಿಸಿರುವ ಹೊಸ ಪ್ರಯತ್ನ ಎಂದು ಹೇಳಲಾಗಿದೆ. ಕಮಿಷನರ್ ಬಿ. ದಯಾನಂದ್ ಅವರು ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ತಾವೇ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net