VIDEO | ಬರಿಗೈಯಲ್ಲಿ ಹಾವನ್ನು ಸೆರೆಹಿಡಿದ ಯುವತಿ!; ವಿಡಿಯೋ ಕಂಡು ನಿಬ್ಬೆರಗಾದ ನೆಟ್ಟಿಗರು

Untitled design (96)
Published on

ನವದೆಹಲಿ: ಹಾವುಗಳನ್ನು ನೋಡಿದರೆ ಸಾಕು ಹೆದರಿ ಓಡುವವರ ಸಂಖ್ಯೆಯೇ ಅತೀ ಹೆಚ್ಚು! ಗುಡ್ಡಗಾಡು ಪ್ರದೇಶಗಳು ಸೇರಿದಂತೆ ನೆರಳಿನಿಂದ ಕೂಡಿರುವ ಜಾಗಗಳಲ್ಲಿ ಹಾವುಗಳು ಅಧಿಕವಾಗಿ ಕಾಣಸಿಗುತ್ತವೆ. ಅದೇ ರೀತಿಯಲ್ಲಿ ಹಳ್ಳಿ ಮನೆಯೊಂದರಲ್ಲಿ ಪತ್ತೆಯಾದ ಕೇರೆ ಹಾವನ್ನು ಯುವತಿಯೊಬ್ಬಳು ಧೈರ್ಯವಾಗಿ, ಬರಿಗೈಯಲ್ಲಿ ಸೆರೆಹಿಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ.

'ಸರ್ಪಮಿತ್ರ ನೀತಾ ಗಜಾರೆ' ಎಂಬ ಹೆಸರಿನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ದೃಶ್ಯ ಪೋಸ್ಟ್​ ಆಗಿದೆ. ವಿಡಿಯೋದಲ್ಲಿ ಯುವತಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಬರಿಗೈಯಲ್ಲಿ ಕೇರೆ ಹಾವನ್ನು ಸೆರೆಹಿಡಿದಿದ್ದಾರೆ. ಹಾವನ್ನು ಸುರಕ್ಷಿತವಾಗಿ ಹಸಿರು ಚೀಲದೊಳಗೆ ಸೇರಿಸಿ, ತದನಂತರ ಕಾಡಿನ ಪ್ರದೇಶಕ್ಕೆ ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದ್ದು, ಹಲವರು ಯುವತಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net