

ಕುಶಾಲನಗರ: ಪಟ್ಟಣದ ಬಿ.ಎಂ.ರಸ್ತೆಯಲ್ಲಿ ಗಿರಿಯಾಸ್‌ನ 141ನೇ ಶಾಖೆಯನ್ನು ಶನಿವಾರ ಕಂಪನಿ ನಿರ್ದೇಶಕ ನವೀನ್ ಗಿರಿಯಾ ಉದ್ಘಾಟಿಸಿದರು.
1971ರಲ್ಲಿ ಕೇವಲ 240 ಚದರ ಅಡಿಯಲ್ಲಿ ಸ್ಥಾಪನೆಯಾದ ಗಿರಿಯಾಸ್ ಇವತ್ತು 141ನೇ ಶಾಖೆ ಉದ್ಘಾಟನೆಯಾಗಿದೆ. ಕನ್ನಡಿಗರ ವಿಶ್ವಾಸ ಹಾಗೂ ನಂಬಿಕೆ ಗಳಿಸಿ ಉದ್ಯಮದಲ್ಲಿ ನಮ್ಮದೇ ಆದ ಛಾಪು ಮೂಡಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಉದ್ಘಾಟನಾ ದಿನದ ಅಂಗವಾಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಮೊಬೈಲ್, ಲ್ಯಾಪ್‌ಟಾಪ್ ಇನ್ನಿತರ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡುತ್ತಿದ್ದೇವೆ. ಶೇ.20ರವರೆಗೆ ಕ್ಯಾಶ್ ಬ್ಯಾಕ್, ಲೋನ್ ಇಎಂಐನ ಒಂದು ಕಂತು ನಾವು ನೀಡುತ್ತಿದ್ದೇವೆ. ಗ್ರಾಹಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕುಶಾಲನಗರ ಶಾಖೆಯ ಕಟ್ಟಡ ಮಾಲೀಕ ಸಿ.ಎಸ್.ಪೂವಯ್ಯ ಮಾತನಾಡಿದರು. ಪಟ್ಟಣದ ಹಲವರಿಗೆ ಆಹ್ವಾನ ಪತ್ರಿಕೆ ವಿತರಿಸಲಾಗಿತ್ತು. ಶಾಖೆ ಆರಂಭದ ದಿನ ಆಹ್ವಾನ ಪತ್ರಿಕೆ ತಂದು ತೋರಿಸಿದರೆ 2 ನೀರಿನ ಪ್ಲಾಸ್ಟಿಕ್ ಬಾಟಲಿ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ ನೂರಾರು ಜನರು ಸರದಿ ಸಾಲಿನಲ್ಲಿ ನಿಂತು ಉಡುಗೊರೆ ಪಡೆದುಕೊಂಡರು.