ಪ್ರಧಾನಿ ಮೋದಿ ಸ್ಟೈಲ್​ ಕಾಪಿ ಮಾಡಿದ ಜಾರ್ಜಿಯಾ ಮೆಲೋನಿ: ಭಾರತ ಸಂಸ್ಕೃತಿ ಪಾಲಿಸಿದ ಇಟಲಿ ಪ್ರಧಾನಿ! Giorgia Meloni

Giorgia Meloni
Published on

Giorgia Meloni : ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತರಾಗಿರುವಂತೆ ಕಾಣುತ್ತಿದೆ. ಏಕೆಂದರೆ, ನಮ್ಮ ಹಿಂದು ಸಂಪ್ರದಾಯವನ್ನು ಅನುಸರಿಸುತ್ತಿದ್ದು, ಅದಕ್ಕೆ ಸಾಕ್ಷಿಯಾಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಮೆಲೋನಿ ಅವರು ಸೋಮವಾರ (ಆಗಸ್ಟ್​ 18) ಅಮೆರಿಕಕ್ಕೆ ಭೇಟಿ ನೀಡಿದರು. ಎಲ್ಲ ಯುರೋಪಿಯನ್ ನಾಯಕರು ಝೆಲೆನ್ಸ್ಕಿಯನ್ನು ಬೆಂಬಲಿಸಲು ನಿನ್ನೆ ಅಮೆರಿಕದ ವೈಟ್​ಹೌಸ್​ನಲ್ಲಿ ಒಟ್ಟುಗೂಡಿದರು. ನಿನ್ನೆ ಮೆಲೋನಿ ಅವರು ಶ್ವೇತಭವನವನ್ನು ತಲುಪಿದಾಗ, ಅವರು ಅಮೆರಿಕನ್ ಸಿಬ್ಬಂದಿಯನ್ನು 'ನಮಸ್ತೆ' ಎಂದು ಸ್ವಾಗತಿಸಿದರು.

ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯಾರಿಗೇ ಆಗಲಿ ನಮಸ್ತೆ ಎಂದು ಕೈ ಮುಗಿದು ಗೌರವ ಸಲ್ಲಿಸುವುದು ನಮ್ಮ ಭಾರತೀಯ ಸಂಪ್ರದಾಯ. ಈ ವಿಧಾನವನ್ನು ಪ್ರಧಾನಿ ಮೋದಿ ಅವರ ಎಲ್ಲೇ ಹೋದರು ಅನುಸರಿಸುತ್ತಾರೆ. ಇದೇ ವಿಧಾನವನ್ನು ಇದೀಗ ಮೆಲೋನಿ ಅವರು ಅನುಸರಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಸೋಮವಾರ, ಯುಎಸ್ ಶಿಷ್ಟಾಚಾರ ಮುಖ್ಯಸ್ಥೆ ಮೋನಿಕಾ ಕ್ರೌಲಿ ಇಟಾಲಿಯನ್ ಪ್ರಧಾನಿ ಮೆಲೋನಿ ಅವರನ್ನು ಸ್ವಾಗತಿಸಿದರು. ಈ ವೇಳೆ ಮೆಲೋನಿ ಅವರು ಮೊದಲು ಕೈಕುಲುಕಿ ಮಾತನಾಡಿದರು. ನಂತರ ಮೆಲೋನಿ ಕೈಗಳನ್ನು ಮಡಚಿ ನಮಸ್ತೆ ಹೇಳಿ ಹೋದರು. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.

ಇಟಲಿಯಲ್ಲಿ ನಡೆದ G7 ಸಭೆಯಲ್ಲಿ ಮೆಲೋನಿ ಅವರು ಜಾಗತಿಕ ನಾಯಕರನ್ನು ಇದೇ ರೀತಿ ಸ್ವಾಗತಿಸಿದರು. ಶೃಂಗಸಭೆಯಲ್ಲಿ ಮೋದಿ ಕೂಡ ಮೆಲೋನಿ ಅವರನ್ನು ಅದೇ ರೀತಿಯಲ್ಲಿ ಸ್ವಾಗತಿಸಿದರು. ಆ ವಿಡಿಯೋ ಆಗ ವೈರಲ್ ಆಗಿತ್ತು. ಅಲ್ಲದೆ, ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ, ಮೋದಿ-ಮೆಲೋನಿ ಸೆಲ್ಫಿ ಕೂಡ ವೈರಲ್ ಆಗಿತ್ತು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಕಾಮೆಂಟ್‌ಗಳು ಬಂದವು. ಇತ್ತೀಚೆಗೆ, ಮೆಲೋನಿ ಅವರ ನಮಸ್ತೆ ಮತ್ತೊಮ್ಮೆ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net