ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಗಿಣಿರಾಮ’ ನಟಿ
Published on:
Copied
Follow Us
ಬೆಂಗಳೂರು: ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟಿ ನಯನಾ ನಾಗರಾಜ್ ಜೂನ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪಾಪ ಪಾಂಡು, ಗಿಣಿರಾಮ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟಿ ನಯನಾ ನಾಗರಾಜ್. ಗೆಳೆಯ ಸುಹಾಸ್ ಶಿವಣ್ಣ ಜೊತೆ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಯನಾ ಮದುವೆಯಾಗಿದ್ದಾರೆ.
ಈ ಮದುವೆಗೆ ನಟಿ ಚಂದನಾ ಅನಂತಕೃಷ್ಣ, ಸಿಹಿ ಕಹಿ ಚಂದ್ರು ಫ್ಯಾಮಿಲಿ, `ಗಿಣಿರಾಮ’ ಹೀರೋ ರಿತ್ವಿಕ್ ದಂಪತಿ ಆಗಮಿಸಿ ಹೊಸ ಜೋಡಿಗೆ ಶುಭಕೋರಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಶುಭಕೋರಿ ವಿಶ್ ಮಾಡಿದ್ದಾರೆ.