ಜಲಪಾತಕ್ಕೆ ನುಗ್ಗಿದ ದೈತ್ಯ ಹಾವು! ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು..ವಿಡಿಯೋ ವೈರಲ್​​ | Kempty Falls

Kempty Falls
Published on

Kempty Falls: ಸುಂದರವಾದ ಜಲಪಾತದಲ್ಲಿ ಮಿಂದೆದ್ದು, ಆ ನೀರಿನಲ್ಲಿ ಆಟವಾಡುತ್ತಿದ್ದ ಪ್ರವಾಸಿಗರು ತಕ್ಷಣವೇ ಭಯಭೀತರಾಗಿ ಜಲಪಾತದಿಂದ ಓಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​​​ ವೈರಲ್​ ಆಗಿದೆ. ಹಾಗಾದ್ರೆ ಆ ಜಲಪಾತದಿಂದ ಪ್ರವಾಸಿಗರ ದಿಕ್ಕಾಪಾಲಾಗಿ ಓಡಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ.

ಮಸ್ಸೂರಿಯ ಜನಪ್ರಿಯ ಕೆಂಪ್ಟಿ ಜಲಪಾತದಲ್ಲಿ ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ವಿಶ್ರಾಂತಿ, ಮೋಜಿಗಾಗಿ ಆಗಮಸಿದ ನೂರಾರು ಪ್ರವಾಸಿಗರು ಜಲಪಾತದ ನೈಸರ್ಗಿಕ ಕೊಳಕ್ಕೆ ಇದ್ದಕ್ಕಿದಂತೆ ಬಂದ ಭಯಾನಕ ಹಾವನ್ನು ನೋಡಿ ಭಯಬೀತರಾಗಿ ಜೀವ ಉಳಸಿಕೊಳ್ಳಲು ದಿಕ್ಕಾಪಾಲಾಗಿ ಕಿರುಚುತ್ತಾ ಓಡಿದ್ದಾರೆ.

ಈ ಘಟನೆಯ ವೀಡಿಯೊವನ್ನು @littledehradunstories ಎಂಬ ಇನ್‌ಸ್ಟಾಗ್ರಾಮ್‌ ಖಾತೆಯು "ಮಸ್ಸೂರಿಯ ಕೆಂಪ್ಟಿ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಪ್ರವಾಸಿಗರ ನಡುವೆ ಹಾವೊಂದು ಪ್ರವೇಶಿಸಿದೆ. ಅವ್ಯವಸ್ಥೆ ಹೇಗೆ ಉಂಟಾಯಿತು ನೋಡಿ" ಎಂಬ ಕ್ಯಾಪ್ಶನ್​ ನೀಡಿ ಹಂಚಿಕೊಂಡಿದೆ.

ಈ ಸಣ್ಣ ವಿಡಿಯೋದಲ್ಲಿ, ಜಲಪಾತದ ಬುಡದಲ್ಲಿರುವ ಸುಂದರವಾದ ಕೊಳದಲ್ಲಿ ಪ್ರವಾಸಿಗರು ಆನಂದಿಸುತ್ತಿರುವುದನ್ನು ಕಾಣಬಹುದು. ಆದರೆ, ಹಾವು ನೀರಿನ ಮೂಲಕ ಜಾರಿ ಹೋಗುವಾಗ ಅಲ್ಲಿ ನೆರೆದಿದ್ದ ಜನರ ಕೂಗನ್ನು ನೋಡಿ ಹೆದರಿದ ಹಾವು ಕೂಡ ಓಡಿತು. ಜೊತೆಗೆ ಹಾವನ್ನು ನೋಡಿ ಭಯಭೀತರಾದ ಜನರು ಕೊಳದಿಂದ ಹೊರಬರಲು ಹರಸಾಹಸ ಪಡುತ್ತಿದ್ದಂತೆ, ಬಂಡೆಗಳ ಮೇಲೆ ಜಾರಿಬಿದ್ದು, ಬೇಲಿಗಳನ್ನು ಹಿಡಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.

ಮಸ್ಸೂರಿ ಬಳಿಯ ರಮಣೀಯ ಬೆಟ್ಟಗಳಲ್ಲಿ ನೆಲೆಸಿರುವ ಕೆಂಪ್ಟಿ ಜಲಪಾತವು, ಅದ್ಭುತವಾದ ಬಹು-ಶ್ರೇಣಿಯ ಜಲಪಾತಗಳು ಮತ್ತು ತಳದಲ್ಲಿ ನೈಸರ್ಗಿಕ ಕೊಳಕ್ಕೆ ಹೆಸರುವಾಸಿಯಾಗಿದೆ, ಅಲ್ಲಿಗೆ ಬರುವ ಪ್ರವಾಸಿಗರು ಹೆಚ್ಚಾಗಿ ಈಜುತ್ತಾರೆ ಮತ್ತು ವಿಶ್ರಾಂತಿ ಪಡೆಯಲು ಇಷ್ಟ ಪಡುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net