Bigest onion; 9 ಕೆ.ಜಿ ಹೆಚ್ಚು ತೂಗುತ್ತೆ ಒಂದು ಈರುಳ್ಳಿ!

Giant onion in line for world record
Published on

ಬ್ರಿಟನ್: ಏನನ್ನೋ ಸಾಧಿಸಬೇಕು ಎಂಬ ರೈತನ ಶ್ರಮಕ್ಕೆ ಫಲ ಸಿಕ್ಕಿದೆ. ಬೃಹತ್ ಈರುಳ್ಳಿ ಬೆಳೆಯುವ ರೈತನ ಕನಸು ನನಸಾಗಿದೆ. ಶ್ರಮದ ಫಲವಾಗಿ ಬೆಳೆದ 9 ಕೆಜಿ ಈರುಳ್ಳಿಯನ್ನು ಕಂಡ ರೈತನ ಸಂತಸ ಅಷ್ಟಿಷ್ಟಲ್ಲ. ಬ್ರಿಟನ್ ನ ರೈತರೊಬ್ಬರು 9 ಕೆಜಿ ಈರುಳ್ಳಿ ಬೆಳೆದು ಸಂಚಲನ ಮೂಡಿಸಿದ್ದಾರೆ.

ಗರೆಥ್ ಗ್ರಿಫಿನ್ ಬ್ರಿಟನ್‌ನ (UK) ಗುರ್ನಸಿ ಪ್ರದೇಶದ ರೈತ. ಈತ ತರಕಾರಿ ಬೆಳೆಯುತ್ತಾನೆ. 65 ವರ್ಷದ ಗರೆಥ್ ಯಾವಾಗಲೂ ಹೊಸ ಬೆಳೆಗಳನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾನೆ. ಇಷ್ಟು ದೊಡ್ಡ ಗಾತ್ರದ ಈರುಳ್ಳಿ ಬೆಳೆಯಲು 12 ವರ್ಷಗಳಿಂದ, ಪ್ರಯತ್ನಿಸುತ್ತಿದ್ದಾರೆ. ಅವರ ಶ್ರಮ ಕೊನೆಗೂ ಫಲ ನೀಡಿತು.

ಗರೆಥ್ 8.9 ಕೆಜಿ ತೂಕದ ಈರುಳ್ಳಿಯನ್ನು ಬೆಳೆದಿದ್ದಾನೆ. ಅವರು ಬೆಳೆದ ಈರುಳ್ಳಿ ವಿಶ್ವದ ಅತಿ ದೊಡ್ಡದು ಎಂದು ಗಿನ್ನಿಸ್ ವಿಶ್ವ ದಾಖಲೆಯಿಂದ ಪ್ರಮಾಣೀಕರಿಸಲ್ಪಟ್ಟಿದೆ. ನಿಜಕ್ಕೂ ಅದ್ಭುತ ಮತ್ತು ದೊಡ್ಡ ಈರುಳ್ಳಿ ಎಂದು ನೆಟಿಜನ್‌ಗಳು ಹೊಗಳುತ್ತಿದ್ದಾರೆ. ಈರುಳ್ಳಿ 8.9 ಕೆಜಿ ತೂಕ ಮತ್ತು 21 ಇಂಚು ಉದ್ದವಿದೆ. 

ಈ ಬೃಹತ್ ಈರುಳ್ಳಿಯನ್ನು ಬೆಳೆದ ರೈತ ಗರೆಥ್ ಮಾತನಾಡಿ, ಈ ಬೆಳೆಗೆ ವಿಶೇಷ ಕಾಳಜಿ ವಹಿಸಲಾಗಿದೆ. ಹೆಚ್ಚುವರಿ ಬೆಳಕು ಮತ್ತು ಸ್ವಯಂಚಾಲಿತ ನೀರಾವರಿಯಂತಹ ವಿಶೇಷ ಕ್ರಮಗಳೊಂದಿಗೆ, ಈರುಳ್ಳಿಯ ದೊಡ್ಡ ಬೆಳೆ ಬೆಳೆಯಬಹುದು. ಈ ದೊಡ್ಡ ಗಾತ್ರದ ಬಲ್ಬ್ಗಳನ್ನು ಸಾಮಾನ್ಯ ಈರುಳ್ಳಿಯಂತೆ ಬೇಯಿಸಬಹುದು. ಆದರೆ ರುಚಿ ಸ್ವಲ್ಪ ಕಡಿಮೆ. ಸರಿಯಾದ ಬೀಜ ಮತ್ತು ಸರಿಯಾದ ಕೃಷಿ ವಿಧಾನಗಳಿಂದ ಮಾತ್ರ ಇಂತಹವುಗಳು ಸಾಧ್ಯ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್  ಅಧಿಕೃತವಾಗಿ ಘೋಷಿಸಬೇಕು ಎಂದು ಈ ಸಾಧನೆ ಮಾಡಿದ ರೈತ ಗರೆಥ್ ಗ್ರಿಫಿನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net