`ಘೋಸ್ಟ್‌’ ಸಿನಿಮಾ ಅ.19ರಂದು ಅದ್ಧೂರಿಯಾಗಿ ತೆರೆ ಕಂಡಿದ್ದು ಮೊದಲ ದಿನದ ಗಳಿಕೆ ಎಷ್ಟು?

ghost
Published on

ಕರ್ನಾಟಕದಲ್ಲಿ ಹೆಚ್ಚು ಕಡಿಮೆ 300 ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಘೋಸ್ಟ್​​​ ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು 2ನೇ ದಿನ ಮುನ್ನುಗ್ಗುತ್ತಿದೆ.


ಆದರೆ ಈ ಸಿನಿಮಾದ ಜೊತೆಗೆ ಇಳಯದಳಪತಿ ವಿಜಯ್ ನಟನೆಯ ಲಿಯೋ ಮತ್ತು ಬಾಲಯ್ಯ ಅಭಿನಯದ ಭಗವಂತ್ ಕೇಸರಿ ಚಿತ್ರವೂ ಈ ದಿನ ರಿಲೀಸ್ ಆಗಿವೆ. ಇವುಗಳನ ಮಧ್ಯೆ ಕನ್ನಡದ ಘೋಸ್ಟ್ ಸಿನಿಮಾ ಅದ್ಭುತ ಓಪನಿಂಗ್ ಪಡೆದುಕೊಂಡಿದೆ. ಫಸ್ಟ್ ಡೇ ಕೋಟಿ ಕೋಟಿ ಕಲೆಕ್ಷನ್ ಕೂಡ ಮಾಡಿದೆ.


ಮೊದಲೇ ದಿನವವೇ 1500 ಶೋಗಳೂ ಆಗಿವೆ. ಆ ಒಂದು ಲೆಕ್ಕದಂತೆ ನೋಡ್ತಾ ಹೋದ್ರೆ, ಮೊದಲ ಡೇ ಕಲೆಕ್ಷನ್ ಕೋಟಿ ಕೋಟಿ ಆಗಿದ್ದು, ಒಟ್ಟು ಒಂದು ವಾರದ ಕಲೆಕ್ಷನ್ ನಲ್ಲಿಯೇ ಶೇಕಡ 50 ರಷ್ಟು ಮಾತ್ರ ನಿರ್ಮಾಪಕರಿಗೆ ಹೋಗುತ್ತದೆ.


“ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.ಘೋಸ್ಟ್’ ಚಿತ್ರದ ತೆಲುಗು ಹಾಗೂ ಹಿಂದಿಯ ವಿತರಣಾ ಹಕ್ಕನ್ನು ಪಡೆದುಕೊಂಡಿದೆ ಎಂದು ಸಂದೇಶ್ ತಿಳಿಸಿದ್ದಾರೆ.


ಇದೇ ತಿಂಗಳ 27 ರಂದು ತೆಲುಗು ಭಾಷೆಯಲ್ಲಿ ಘೋಸ್ಟ್ ರಿಲೀಸ್ ಆಗುತ್ತದೆ ಅನ್ನುವ ಸುದ್ದಿ ಇದೆ. ಒಟ್ಟಾರೆ, ಕನ್ನಡದ ಘೋಸ್ಟ್ ಸಿನಿಮಾ ಮೊದಲ ದಿನವೇ ಹೆಚ್ಚು ಜನರನ್ನ ಸೆಳೆದಿದೆ. ಒಳ್ಳೆ ಕಲೆಕ್ಷನ್ ಕೂಡ ಮಾಡಿದೆ ಅಂತಲೇ ಈಗ ಹೇಳಬಹುದು. ಘೋಸ್ಟ್​​ ಸಿನಿಮಾ ಮೊದಲ ದಿನವೇ ಸುಮಾರು 2ಕೋಟಿಯಷ್ಟು ಕಲೆಕ್ಷನ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net