ಧರ್ಮದ ಮೌಲ್ಯ ಎತ್ತಿ ಹಿಡಿಯಲು ಸನ್ನದ್ಧರಾಗಿ

14sri-1 (2)
ಶೃಂಗೇರಿಯಲ್ಲಿ ಆಯೋಜಿಸಿದ್ದ ಸದ್ಭಾವನಾ ಸಭೆಯಲ್ಲಿ ಸುಂಕುರ್ಡಿ ವಿವೇಕಾನಂದ್, ಹೆಬ್ಬಿಗೆ ರಾಮಚಂದ್ರ, ತೋರಣಗದ್ದೆ ನಟರಾಜ್, ಮೀನಾ, ಸುರೇಶ್ಚಂದ್ರ, ಕವನ ಇದ್ದರು.
Published on

ಶೃಂಗೇರಿ: ನಮ್ಮ ಹಿಂದು ಸಂಸ್ಕೃತಿ ಜೀವನದ ಪರಿಪೂರ್ಣತೆ ಬೋಧಿದ ಸನಾತನ ಧರ್ಮ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿದೆ ಎಂದು ಕುಟುಂಬ ಪ್ರಬೋಧನ್ ಪ್ರಾಂತ್ಯದ ಟೋಳಿ ಸದಸ್ಯ ಸರ್ವಸ್ವಾಮಿ ಹೇಳಿದರು.
ಮಾನಾಗಾರಿನ ಜ್ಞಾನ ಭಾರತೀ ವಿದ್ಯಾ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸದ್ಭಾವನಾ ಸಭೆಯಲ್ಲಿ ಉಪನ್ಯಾಸ ನೀಡಿ, ಅವಿಭಕ್ತ ಕುಟುಂಬದ ವ್ಯವಸ್ಥೆ ಮರೆಯಾಗಿದೆ. ಹಿಂದು ಸಮಾಜದ ವಿಶಾಲತೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ನಾವು ಜಾಗೃತರಾಗಿ ಧರ್ಮದ ಮೌಲ್ಯವನ್ನು ಎತ್ತಿ ಹಿಡಿಯಲು ಸನ್ನದ್ಧರಾಗಬೇಕು ಎಂದರು.
ನಾವು-ನಮ್ಮದು ಎಂಬ ಭಾವ ಮರೆಯಾಗಿ ನಾನು-ನನ್ನದು ಎಂಬ ಸ್ವಾರ್ಥ ಭಾವ ಪರಿಮೂಡುತ್ತಿದೆ. ಇದರಿಂದ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದೆ. ಸಮಾಜದಲ್ಲಿ ಅಪ್ರಸ್ತುತ ಪ್ರಕರಣಗಳು, ಪಾಶ್ಚತ್ಯ ಸಂಸ್ಕೃತಿಯನ್ನು ಪ್ರೀತಿಸುವ ಮನೋಭಾವ ಹೆಚ್ಚುತ್ತಿದೆ. ಸನಾತನ ಧರ್ಮದ ಮೌಲ್ಯಕ್ಕಾಗಿ ಶ್ರಮಿಸಿದ ಹಿರಿಯರು ನೀಡಿದ ಸಂಸ್ಕಾರವನ್ನು ಗೌರವಿಸುವ ಮನಸ್ಸುಗಳು ಬೆಳೆಯಬೇಕಿದೆ. ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಇಂತಹ ಸಭೆಗಳನ್ನು ಏರ್ಪಡಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದರು.
ಸಭೆಯಲ್ಲಿ ಶೃಂಗೇರಿ ಜಿಲ್ಲಾ ಸಂಘದ ಸಂಚಾಲಕ ನಾರಾಯಣ್, ಸಾಮಾಜಿಕ ಸೇವಾಕರ್ತ ಎ.ಎಸ್.ನಯನ, ಸಂಘ ಪರಿವಾರದ ಮುಖ್ಯಸ್ಥ ಕೆ. ಶ್ರೀ ಕಾಂತ್ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net