

ಹರಿಯಾಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಿಂದ ತಮ್ಮ ಪ್ರಚಾರ ಶೈಲಿಯನ್ನು ಬದಲಾಯಿಸಿದ್ದಾರೆ. ಪಕ್ಷದ ಗೆಲುವಿನ ಹೊರತಾಗಿ ರಾಹುಲ್ ಅವರ ಈ ಅಭಿಯಾನ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ರಾಹುಲ್ ಕಾರ್ಮಿಕರು, ರೈತರೊಂದಿಗೆ ಮಾತನಾಡುವ ವಿಡಿಯೋ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ರಾಹುಲ್ ಜೊತೆಗೆ ಪ್ರಿಯಾಂಕಾ ಗಾಂಧಿ ಕೂಡ ಬಹುತೇಕ ಎಲ್ಲೆಡೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಪಕ್ಷಕ್ಕೆ ಹೊಸ ಹುರುಪು ನೀಡಲು ಶತಪ್ರಯತ್ನ ನಡೆಸುತ್ತಿದ್ದಾರೆ. ಈ ಕ್ರಮದಲ್ಲಿ ಹರಿಯಾಣದ ಸೋನಿಪತ್ನಲ್ಲಿ ಮಹಿಳಾ ರೈತರನ್ನು ಭೇಟಿ ಮಾಡಲಾಗಿದೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಮಹಿಳಾ ರೈತರೊಂದಿಗೆ ಮಾತನಾಡುತ್ತಾ ಕಷ್ಟಗಳನ್ನೂ ವಿಚಾರಿಸಿದ್ದಾರೆ. ಮಹಿಳಾ ಸಬಲೀಕರಣದ ಜೊತೆಗೆ ಜಿಎಸ್ಟಿ ಕುರಿತು ಚರ್ಚಿಸಲಾಗಿದೆ. ಅಷ್ಟೇ ಅಲ್ಲ, ದೆಹಲಿಯಲ್ಲಿರುವ ಪ್ರಿಯಾಂಕಾ ಗಾಂಧಿ ಅವರ ಮನೆಗೆ ವಿಶೇಷ ವಾಹನದಲ್ಲಿ ಅವರನ್ನು ಕರೆತರಲಾಯಿತು. ಮಹಿಳಾ ರೈತರಿಗೆ ಊಟ ಕೂಡ ನೀಡಲಾಯಿತು. "ಸರ್ಕಾರ ನನ್ನ ಮನೆಯನ್ನು ವಶಪಡಿಸಿಕೊಂಡಿದೆ. ಅದಕ್ಕಾಗಿಯೇ ನಾನು ಇಲ್ಲಿಗೆ ಕರೆದಿದ್ದೇನೆ" ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದರು. ಆ ಮಹಿಳೆಯರು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಾಕಷ್ಟು ಮೋಜು ಮಾಡಿದರು. ರಾಹುಲ್ ಮಕ್ಕಳೊಂದಿಗೂ ಮಾತನಾಡಿದರು. ಮಹಿಳೆಯರು ಯಾವತ್ತೂ ಹಿಂದೆ ಸರಿಯಬಾರದು, ಸಮಸ್ಯೆ ಬಂದರೂ ಧೈರ್ಯದಿಂದ ನಿಲ್ಲಬೇಕು ಎಂದು ಸಲಹೆ ನೀಡಿದರು.
ಹೀಗೆ ಸೋನಿಯಾ ಗಾಂಧಿಯವರೊಂದಿಗೆ ಮಾತನಾಡಿದ ಮಹಿಳೆಯೊಬ್ಬರು ತಮಾಷೆಯಾಗಿ ಪ್ರಶ್ನೆಯೊಂದನ್ನು ಕೇಳಿದರು. “ರಾಹುಲ್ ಜೀ ಮದುವೆಯಾಗುವುದಿಲ್ಲವೇ''?. ಅದಕ್ಕೆ ಸೋನಿಯಾ ಗಾಂಧಿ ನಸುನಗುತ್ತಲೇ ಉತ್ತರಿಸಿದರು.."ನೀವೇ ಹುಡುಗಿ ಹುಡುಕಿ'' ಇದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜುಲೈ 16 ರಂದು ಮಹಿಳಾ ರೈತರು ಪ್ರಿಯಾಂಕಾ ಗಾಂಧಿ ಮನೆಗೆ ಹೋಗಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ನನಗೆ, ತಾಯಿ ಮತ್ತು ಪ್ರಿಯಾಂಕಾಗೆ ಇದು ಮರೆಯಲಾಗದ ದಿನ. ನಮ್ಮ ಮನೆಯಲ್ಲಿ ವಿಶೇಷ ಅತಿಥಿಗಳಿದ್ದರು. ಸೋನಿಪತ್ನ ರೈತ ಮಹಿಳೆಯರು ನಮ್ಮೊಂದಿಗೆ ರಾತ್ರಿ ಊಟ ಮಾಡಿದರು. ಮೋಜು ಮಾಡಿದರು. ಅವರು ನಮಗೆ ಅನೇಕ ಅಮೂಲ್ಯ ಉಡುಗೊರೆಗಳನ್ನು ನೀಡಿದರು. ಅವರು ಮನೆಯಲ್ಲಿ ತಯಾರಿಸಿದ ತುಪ್ಪ, ಲಸ್ಸಿ, ಉಪ್ಪಿನಕಾಯಿ ಜೊತೆಗೆ ಪ್ರೀತಿಯನ್ನು ನೀಡಿದರು '' ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.