

ತ್ಯಾಗರ್ತಿ: ಬಿ.ವೈ.ರಾಘವೇಂದ್ರ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ವಿಜಯೋತ್ಸವ ಆಚರಿಸಿದರು.
ಪಟ್ಟಣದ ಮಾರಿಕಾಂಬಾ ವೃತ್ತದಲ್ಲಿ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಗೆಲುವನ್ನು ಸಂಭ್ರಮಿಸಿದರು. ಪಕ್ಷದ ಪ್ರಮುಖರಾದ ಶಿವು ತ್ಯಾಗರ್ತಿ ಮಾತನಾಡಿ, ಅಭಿವೃದ್ಧಿ ಹರಿಕಾರ ಬಿ.ವೈ.ರಾಘವೇಂದ್ರ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸುತ್ತಿರುವುದು ಹೆಮ್ಮೆಯ ಸಂಗತಿ. ಸರ್ಕಾರದಲ್ಲಿ ಉನ್ನತ ಹುದ್ದೆ ಸಿಗಲಿ ಎಂದು ಆಶಿಸುತ್ತೇವೆ. ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚು ಅನುಕೂಲ ಆಗಲಿದೆ ಎಂದರು. ಶಕ್ತಿ ಕೇಂದ್ರದ ಕಾರ್ಯದರ್ಶಿ ಪಾಂಡುರಂಗ, ಗ್ರಾಪಂ ಸದಸ್ಯರಾದ ಇಸಾಕ್, ಹನುಮಂತ, ಪ್ರಮುಖರಾದ ಪರಶುರಾಮ್, ಲಿಂಗಪ್ಪ, ಶಿವು ಬೆಳಂದೂರು, ಯೋಗೇಶ್‌ಕುಮಾರ್, ದಿನೇಶ್ ಇತರರಿದ್ದರು.