ರೈಲಿನಲ್ಲೇ ವಾಸಿಸಲು ಮುಂದಾದ ಯುವತಿ, ಅಲ್ಲೇ ಸ್ನಾನ, ಅಲ್ಲೇ ಓದು, ಅಲ್ಲೇ ನಿದ್ದೆ..!

train woman
Published on

ಬಾಡಿಗೆ ಮನೆಗಳಲ್ಲಿ ಇತ್ತೀಚೆಗೆ ಬದುಕೋದೇ ಕಷ್ಟ ಅನ್ನುವಂತಾಗಿದೆ. ಯಾಕೆ ಈ ಮಾತು ಅಂತೀರಾ? ಹೌದು ತಮಗೆ ಬರುವ ಅಲ್ಪ ಸ್ವಲ್ಪ ಸಂಬಳದಲ್ಲಿ ಬಹುಪಾಲು ಮನೆ ಬಾಡಿಗೆಗೇ ಹೋಗುತ್ತದೆ. ದುಡಿದ ದುಡ್ಡೆಲ್ಲಾ ಬಾಡಿಗೆ ಮನೆಗೇ ನೀಡುವಂತಾಗಿದೆ. ಖರ್ಚನ್ನು ಕಡಿಮೆ ಮಾಡಲು ಯುವತಿ ವಿಶೇಷ ಪ್ಲ್ಯಾನ್​ ಒಂದನ್ನ ಮಾಡಿದ್ದಾಳೆ.


ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದವಳು, ಈಗ ರೈಲಿನಲ್ಲಿ ವಾಸಿಸಲು ಶುರು ಮಾಡಿದ್ದಾಳೆ. ಜರ್ಮನಿಯಲ್ಲಿ ಯುವತಿಯೊಬ್ಬಳು ಬಾಡಿಗೆ ಮನೆಯಿಂದ ಬೇಸತ್ತು ರೈಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.


ಜರ್ಮನಿಯಲ್ಲಿ ಯುವತಿಯೊಬ್ಬಳು ಬಾಡಿಗೆ ಮನೆಯಿಂದ ಬೇಸತ್ತು ರೈಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇಡೀ ದಿನ ರೈಲಿನಲ್ಲಿ ಇರಲು ಆಕೆ ಬೇಸರವಾಗುವುದಿಲ್ಲವಂತೆ, ರಜೆ ಎಂದುಕೊಳ್ಳುತ್ತಾಳಂತೆ, ಮನೆಗಿಂತ ಅಗ್ಗವೂ ಕೂಡ ಎನ್ನುತ್ತಾರೆ ಯುವತಿ.


ಯುವತಿ ಹೆಸರು ಲಿಯೋನಿ, ಈ ಹಿಂದೆ ಸಾಮಾನ್ಯ ಜನರಂತೆ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಬಾಡಿಗೆ ಮನೆಯ ಮಾಲೀಕರೊಂದಿಗೆ ಜಗಳವಾಯಿತು, ಅದಾದ ಬಳಿಕ ವಿಶಿಷ್ಟ ಜೀವನಶೈಲಿಯನ್ನು ಆಯ್ಕೆ ಮಾಡಿಕೊಂಡಳು. ಮನೆಯಲ್ಲಿ ವಾಸಿಸುವ ಮೊದಲು ರೈಲಿನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದರು.


2020 ರಲ್ಲಿ, ಹುಡುಗಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದಳು ಮತ್ತು ಅವಳು ರೈಲನ್ನು ಬಿಟ್ಟು ತನ್ನನ್ನು ಕಾರವಾನ್ ಅಂದರೆ ವ್ಯಾನ್‌ಗೆ ಬದಲಾಯಿಸಿದಳು. ಈಗ ಅವಳು ವ್ಯಾನ್‌ನಲ್ಲಿ ಕೆಲಸ ಮಾಡುತ್ತಾಳೆ ಮತ್ತು ತನ್ನ ಜೀವನವನ್ನು ಆನಂದಿಸುತ್ತಿದ್ದಾಳೆ. ಯುವತಿ ಪ್ರಕಾರ, ಈ ಜೀವನವನ್ನು ಹೆಚ್ಚು ಆರಾಮದಾಯಕ ಮತ್ತು ಆಸಕ್ತಿದಾಯಕವೆಂದು ಭಾವಿಸುತ್ತಾಳೆ.


ತನ್ನ ಅಗತ್ಯ ಬಟ್ಟೆಗಳು, ಟ್ಯಾಬ್ಲೆಟ್ ಕಂಪ್ಯೂಟರ್ ಮತ್ತು ಸ್ಯಾನಿಟರಿ ಬ್ಯಾಗ್‌ನೊಂದಿಗೆ ಮಾತ್ರ ಪ್ರಯಾಣಿಸುತ್ತಾಳೆ. ಅವರ ಎಲ್ಲಾ ಸ್ನೇಹಿತರು ಈ ರೀತಿಯ ಅಲೆಮಾರಿತನವನ್ನು ಇಷ್ಟಪಡುವುದಿಲ್ಲ ಎಂದು ಆಕೆ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net