America | ಜಾರ್ಜ್ ಸೊರೊಸ್‌ಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದ ಜೋ ಬಿಡನ್​​​; ಇದೊಂದು ದುರಂತ ಎಂದಿದ್ದೇಕೆ ಎಲಾನ್​​ ಮಸ್ಕ್​​​

Untitled design - 2025-01-05T165902.794
Published on

ವಾಷಿಂಗ್ಟನ್​ ಡಿಸಿ: ಅಮೆರಿಕ(America) ಅಧ್ಯಕ್ಷ ಜೋ ಬಿಡನ್​​ ಶನಿವಾರ (ಜನವರಿ 4) ಜಾರ್ಜ್​ ಸೊರೊಸ್​​ಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಇದೊಂದು ದುರಂತ ಎಂದು ಬಿಲಿಯನೇರ್​​​ ಎಲಾನ್​ ಮಸ್ಕ್​ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸೊರೊಸ್ ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾನೆ ಎಂದು ಮಸ್ಕ್ ಹೇಳಿದ್ದಾರೆ.

ಅಧ್ಯಕ್ಷ ಜೋಬಿಡನ್​​​​​ ಸೊರೊಸ್​ಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಫೋಟೋವನ್ನು ಎಲಾನ್​​ ಮಸ್ಕ್​​ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಬಿಡೆನ್ ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಗೆ ಪ್ರಶಸ್ತಿ ನೀಡುತ್ತಿರುವುದು ಕಂಡುಬಂದಿದೆ. ಈ ಫೋಟೋ ನೋಡಿ ಎಲಾನ್​ ಮಸ್ಕ್​ ಬಹುಶಃ ಬೆಳಕಿನಿಂದಾಗಿ ಸೊರೊಸ್ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ.

ಈ ಮಧ್ಯೆ ಕಳೆದ ವರ್ಷ ನವೆಂಬರ್‌ನಲ್ಲಿ ಎಲಾನ್​ ಮಸ್ಕ್​​ ನೀಡಿರುವ ಸಂದರ್ಶನವೊಂದರ ಕ್ಲಿಪ್​​ವೊಂದು ವೈರಲ್​ ಆಗುತ್ತಿದೆ. ಇದರಲ್ಲಿ ಅವರು ಸೊರೊಸ್ ಸಮಾಜದ ರಚನೆಯನ್ನು ನಾಶಪಡಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜಾರ್ಜ್ ಸೊರೊಸ್ ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ. ಅವರು ನಾಗರಿಕತೆಯ ರಚನೆಯನ್ನು ನಾಶಪಡಿಸುವ ಕೆಲವು ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಜಾರ್ಜ್ ಸೊರೊಸ್ ಯಾರು

ಶ್ವೇತಭವನದ ಪ್ರಕಾರ, ಜಾರ್ಜ್ ಸೊರೊಸ್ ಒಬ್ಬ ಬಿಲಿಯನೇರ್ ಹೂಡಿಕೆದಾರ ಮತ್ತು ಓಪನ್ ಸೊಸೈಟಿ ಫೌಂಡೇಶನ್ಸ್ ಸಂಸ್ಥಾಪಕ. ಅವರು 120ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅನೇಕ ಉಪಕ್ರಮಗಳನ್ನು ಮುನ್ನಡೆಸಿದ್ದಾರೆ. ಆದರೆ, ಸೊರೊಸ್ ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಅವರು ಭಾರತೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜಾರ್ಜ್ ಸೊರೊಸ್ ಅವರು ಭಾರತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಈ ಬಗ್ಗೆ ಭಾರತದ ಸಂಸತ್ತಿನಲ್ಲಿ ಹಲವು ಬಾರಿ ಕೋಲಾಹಲ ಎದ್ದಿದೆ. ಇಷ್ಟೇ ಅಲ್ಲ ಸೊರೊಸ್ ಭಾರತ ಸರ್ಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳಿಗೆ ಹಣ ನೀಡಿದ ಆರೋಪವೂ ಇದೆ. ಆದರೆ ಇದೀಗ ಜೋ ಬಿಡನ್ ಅವರಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದ್ದಾರೆ. ಸೊರೊಸ್ ಜತೆಗೆ ಅಮೆರಿಕ ಅಧ್ಯಕ್ಷ ಬಿಡೆನ್ ಅವರು ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಫ್ಯಾಷನ್ ಡಿಸೈನರ್ ರಾಲ್ಫ್ ಲಾರೆನ್, ಫುಟ್ಬಾಲ್ ಸೂಪರ್​​ಸ್ಟಾರ್​ ಲಿಯೋನೆಲ್ ಮೆಸ್ಸಿ ಮತ್ತು ಮಾಜಿ ರಕ್ಷಣಾ ಸಚಿವ ದಿವಂಗತ ಆಶ್ಟನ್ ಕಾರ್ಟರ್ ಅವರನ್ನು ಈ ಪ್ರಶಸ್ತಿಯೊಂದಿಗೆ ಗೌರವಿಸಿದರು.(ಏಜೆನ್ಸೀಸ್​​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net