ಭೂವಿಜ್ಞಾನಿ, ಸಾಹಿತಿ ಡಾ.ಎಚ್. ಚಂದ್ರಶೇಖರ ನಿಧನ

Untitled-1
Published on

ಬೆಂಗಳೂರು: ಭೂವಿಜ್ಞಾನಿ, ಸಾಹಿತಿ ಮತ್ತು ಸಂಶೋಧಕ ಡಾ. ಎಚ್.ಚಂದ್ರಶೇಖರ ಅವರು ಮಂಗಳವಾರ ಬೆಳಗ್ಗೆ ನಿಧನರಾದರು.

ಚಂದ್ರಶೇಖರ ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗ್ಗೆ ಮನೆಯಲ್ಲೇ ಕೊನೆಯುಸಿರೆಳೆದರು. ಪತ್ನಿ ವನಜಾಕ್ಷಿ, ಮಕ್ಕಳಾದ ರವೀಂದ್ರ ಮತ್ತು ಮಹೇಂದ್ರ ಅವರನ್ನು ಅಗಲಿದ್ದಾರೆ.

ಭೂವಿಜ್ಞಾನ ಇಲಾಖೆಯಲ್ಲಿ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಚಂದ್ರಶೇಖರ ಅವರು ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿದ್ದರು. ವಚನ ಸಾಹಿತ್ಯದ ಅಧ್ಯಯನಕ್ಕೂ ಕೊಡುಗೆ ನೀಡಿದ್ದರು. ಕರ್ನಾಟಕದ ಹಲವು ಶಾಸನಗಳು, ಸ್ಥಳಗಳು, ನದಿಗಳು, ಜಲಪಾತಗಳು ಮತ್ತು ಬೆಟ್ಟಗುಡ್ಡಗಳ ನಿಖರ ಮಾಹಿತಿಯನ್ನು ಭೂವಿಜ್ಞಾನದ ನೆಲೆಯಲ್ಲಿ ಹಲವು ಲೇಖನಗಳನ್ನು ಬರೆದಿದ್ದರು. 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಗೌರವಗಳು ಸಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net