ನಿಂತುಕೊಂಡೇ ನಿದ್ರಿಸುವ ಜೀವಿಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ... General Knowledge

General Knowledge
Published on

General Knowledge : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ. ಕೆಲವೊಂದು ಜೀವಿಗಳ ವರ್ತನೆಗಳು ಎಷ್ಟೊಂದು ವಿಚಿತ್ರವಾಗಿವೆ ಅಂದರೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಅಂಥದ್ದೇ ಜೀವಿಗಳ ಬಗ್ಗೆ ತಿಳಿಸಿಕೊಡುತ್ತೇವೆ.

ನಿದ್ರೆಯು ಎಲ್ಲ ಜೀವಿಗಳಿಗೆ ತುಂಬಾನೇ ಮುಖ್ಯ. ನಿದ್ರೆಯನ್ನು ಕುಳಿದುಕೊಂಡು ಮತ್ತು ಮಲಗಿಕೊಂಡು ಮಾಡಬಹುದು. ಬಹುತೇಕ ಮಂದಿ ಮಲಗಿಕೊಂಡೇ ನಿದ್ರಿಸುತ್ತಾರೆ. ಈ ರೀತಿ ಮಾಡುವುದರಿಂದ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಗುತ್ತದೆ. ಆದರೆ, ನೀವು ಎಂದಾದರೂ ನಿಂತುಕೊಂಡು ನಿದ್ರೆ ಮಾಡಿದ್ದೀರಾ? ಈ ಪ್ರಶ್ನೆಗೆ ಬಹುತೇಕರು ಇಲ್ಲಾ ಎಂದೇ ಉತ್ತರಿಸುತ್ತಾರೆ. ಆದರೆ, ನಿಮಗೆ ಗೊತ್ತಾ ಕೆಲವು ಪ್ರಾಣಿಗಳು ನಿಂತುಕೊಂಡೇ ನಿದ್ರಿಸುತ್ತವೆ. ಆ ಪ್ರಾಣಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಜಿರಾಫೆ: ಜಿರಾಫೆಗಳು ನಿಂತುಕೊಂಡೇ ಮಲಗುತ್ತವೆ. ಈ ರೀತಿ ಮಲಗಿದರೂ ಅವು ಕೇವಲ ಸ್ವಲ್ಪ ಹೊತ್ತು ಮಾತ್ರ ನಿದ್ದೆ ಮಾಡುತ್ತವೆ.

ಜೀಬ್ರಾ : ಇದು ಕೂಡ ನಿಂತುಕೊಂಡು ಮಲಗುವ ಪ್ರಾಣಿ. ಶತ್ರುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಿಂತುಕೊಂಡೇ ಮಲಗುತ್ತದೆ. ಶತ್ರುಗಳು ಬೇಟೆಯಾಡಲು ತಮ್ಮ ಬಳಿ ಬಂದಾಗ ಬೇಗನೆ ತಪ್ಪಿಸಿಕೊಳ್ಳಲು ನಿಂತುಕೊಂಡು ಮಲಗುವ ಅಭ್ಯಾಸವನ್ನು ಬೆಳೆಸಿಕೊಂಡಿದೆ.

ಕುದುರೆ: ಕುದುರೆಗಳು ಕೆಲವೊಮ್ಮೆ ನಿಂತುಕೊಂಡೇ ಮಲಗುತ್ತವೆ. ಆಪಾಯದಿಂದ ತಪ್ಪಿಸಿಕೊಂಡೆ. ಸಂಭವನೀಯ ಅಪಾಯದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡುತ್ತವೆ.

ಕಾಡೆಮ್ಮೆ: ಕಾಡೆಮ್ಮೆ ನೋಡಲು ತುಂಬಾ ಭಯಂಕರವಾಗಿ ಕಾಣಿಸಬಹುದು, ಆದರೆ ಅದು ನಿಂತುಕೊಂಡೇ ನಿದ್ರಿಸುತ್ತದೆ.

ಫ್ಲೆಮಿಂಗೊ: ಈ ಫ್ಲೆಮಿಂಗೋಗಳು ಒಂದು ಕಾಲಿನ ಮೇಲೆ ನಿಂತು ಮಲಗುವ ಅಭ್ಯಾಸ ಹೊಂದಿರುವ ಪಕ್ಷಿಗಳಾಗಿವೆ. ಈ ಪಕ್ಷಿಯ ಇನ್ನೊಂದು ಗುಣವೆಂದರೆ, ಇದು ಕುದಿಯುವ ನೀರನ್ನು ಸಹ ಕುಡಿಯಬಲ್ಲದು.

ಆನೆ: ಪ್ರಾಣಿಗಳಲ್ಲಿ ಅತ್ಯಂತ ಬಲಿಷ್ಠವಾದದ್ದು ಆನೆ. ಆನೆಗಳು ಕೂಡ ನಿಂತುಕೊಂಡು ಮಲಗುವ ಅಭ್ಯಾಸ ಹೊಂದಿರುತ್ತವೆ. ಆನೆ ತನ್ನ ಜೀವನದ ಬಹುಪಾಲು ನಿಂತುಕೊಂಡು ಮಲಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net