

ಆಲೂರು: ಸಹಕಾರ ಇದ್ದರೆ ಮಾತ್ರ ಸಂಘ ಸಂಸ್ಥೆಗಳು ಅಭಿವೃದ್ಧಿಯಾಗಿ ಸಮಾಜಕ್ಕೆ ಉಪಯೋಗವಾಗುತ್ತವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿಣಿ ಸದಸ್ಯ ಸಿದ್ದೇಶ್ ನಾಗೇಂದ್ರ ಹೇಳಿದರು.
ಪಟ್ಟಣದ ತಾಲೂಕು ವೀರಶೈವ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವೀರಶೈವ ಮಹಾಸಭಾದ 2023-2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಸಮಾಜಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಆದರೂ ಸಂಘಟನೆ ಹಾಗೂ ಸಾಮರಸ್ಯದ ಹಾದಿಯಲ್ಲಿ ನಾವು ಇನ್ನಷ್ಟು ಪರಿಣಾಮಕಾರಿ ಹೆಜ್ಜೆ ಇಡಬೇಕಿದೆ ಎಂದರು. ಸಮುದಾಯ ಮುಖ್ಯ ವಾಹಿನಿಗೆ ಬರಲು ಶೈಕ್ಷಣಿಕ ಅಭಿವೃದ್ಧಿ ಅಗತ್ಯವಾಗಿದೆ ಎಂದರು. ತಾಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ರೇಣುಕಾಪ್ರಸಾದ್ ಮಾತನಾಡಿ, ತಾಲೂಕು ವೀರಶೈವ ಸಂಘದಲ್ಲಿ 1,700 ಸದಸ್ಯರಿದ್ದಾರೆ. ಎಲ್ಲರ ಸಹಕಾರದಿಂದ ಸಾಕಷ್ಟು ಚಟುವಟಿಕೆ ನಡೆದಿದೆ ಎಂದರು. ಸಭಾ ಉಪಾಧ್ಯಕ್ಷ ಜಯಣ್ಣ, ಕಾರ್ಯದರ್ಶಿ ಶಿವಮೂರ್ತಿ, ಸಹಕಾರ್ಯದರ್ಶಿ ಡಾ. ಜಯರಾಜ್, ನಿರ್ದೇಶಕರಾದ ವಿಜಯಕಾಂತ, ಉಮಾ ರವಿಪ್ರಕಾಶ, ಸುಜಾತಾ ಮುಂತಾದವರು ಹಾಜರಿದ್ದರು.
9- ಪೋಟೋ ಕ್ಯಾಪ್ಶನ್:
ಬೇಲೂರಿನ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವೀರಶೈವ ಮಹಾಸಭಾ ಘಟಕದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘಟನೆಯ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ ಸಿದ್ದೇಶ ನಾಗೇಂದ್ರ ಉದ್ಘಾಟಿಸಿ ಮಾತನಾಡಿದರು. ರೇಣುಕಾಪ್ರಸಾದ್, ಜಯಣ್ಣ, ಕಾರ್ಯದರ್ಶಿ ಶಿವಮೂರ್ತಿ ಇದ್ದರು.