ರಿಲಯನ್ಸ್​ ಜಿಯೋ ಪ್ರಯಾಣದಲ್ಲಿ ಫೇಸ್​ಬುಕ್​, ಸಿಲ್ವರ್​ ಲೇಕ್​ ಜತೆಗೂಡಿದ ಜನರಲ್​ ಅಟ್ಲಾಂಟಿಕ್​

reliance jio
Published on

ಮುಂಬೈ: ರಿಲಯನ್ಸ್​ ಜಿಯೋ ಎಂಬ ಸಮುದ್ರದಲ್ಲಿನ ಪ್ರಯಾಣದಲ್ಲಿ ಫೇಸ್​ಬುಕ್​, ಸಿಲ್ವರ್​ ಲೇಕ್​, ವಿಸ್ಟಾ ಈಕ್ವಿಟಿ ಜತೆಗೆ ಈಗ ಜಾಗತಿಕ ಈಕ್ವಿಟಿ ಸಂಸ್ಥೆ ಜನರಲ್​ ಅಟ್ಲಾಂಟಿಕ್​ ಕೂಡ ಸೇರಿಕೊಂಡಿದೆ.

ಈ ವಿಷಯವನ್ನು ಭಾನುವಾರ ತಿಳಿಸಿರುವ ರಿಲಯನ್ಸ್​ ಜಿಯೋ ತನ್ನ ಶೇ.1.34 ಷೇರುಗಳನ್ನು 6,598.38 ಕೋಟಿ ರೂಪಾಯಿಗೆ ಜನರಲ್​ ಅಟ್ಲಾಂಟಿಕ್​ಗೆ ಮಾರಾಟ ಮಾಡಿರುವುದಾಗಿ ಹೇಳಿದೆ.

ಜನರಲ್​ ಅಟ್ಲಾಂಟಿಕ್​ನೊಂದಿಗಿನ ವಾಣಿಜ್ಯ ಪಾಲುದಾರಿಕೆಯಿಂದಾಗಿ ರಿಲಯನ್ಸ್​ ಜಿಯೋದ ಒಟ್ಟಾರೆ ಹೂಡಿಕೆ ಮೊತ್ತ 67,194.75 ಕೋಟಿ ರೂ.ಗೆ ಹೆಚ್ಚಳವಾಗಿದೆ. ಜತೆಗೆ ಅದರ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರೂ.ಗೆ, ಔದ್ಯಮಿಕ ಮೌಲ್ಯ 5.16 ಲಕ್ಷ ಕೋಟಿ ರೂ.ಗೆ ಹೆಚ್ಚಳವಾದಂತಾಗಿದೆ ಎಂದು ತಿಳಿಸಿದೆ.

ಇದಕ್ಕೂ ಮುನ್ನ ಫೇಸ್​ಬುಕ್​, ಸಿಲ್ವರ್​ ಲೇನ್​, ವಿಸ್ಟಾ ಈಕ್ವಿಟಿ ಪಾರ್ಟನರ್ಸ್​ ರಿಲಯನ್ಸ್​ ಜಿಯೋದ ಷೇರುಗಳನ್ನು ಖರೀದಿಸಿದ್ದವು.

ಜನರಲ್​ ಅಟ್ಲಾಂಟಿಕ್​ ಸಂಸ್ಥೆ ಜಾಗತಿಕ ಈಕ್ವಿಟಿ ಸಂಸ್ಥೆಯಾಗಿದೆ. ತಂತ್ರಜ್ಞಾನ, ಗ್ರಾಹಕ, ಆರ್ಥಿಕ ಸೇವೆಗಳು ಮತ್ತು ಆರೋಗ್ಯ ಸೇವಾ ಕ್ಷೇತ್ರಗಳಲ್ಲಿನ ಹೂಡಿಕೆಯಲ್ಲಿ ಒಟ್ಟು 4 ದಶಕಗಳ ಅನುಭವ ಹೊಂದಿದೆ. ಅನ್ವೇಷಣಾತ್ಮಕ ಮತ್ತು ಉದ್ಯಮಶೀಲತಾ ಮನೋಭಾವದ ಜತೆಗೆ ಸಮಗ್ರವಾದ ಬೆಳವಣಿಗೆಗೆ ಅವಕಾಶ ಇರುವ ಕಂಪನಿಗಳಲ್ಲಿ ಬಂಡವಾಳ ತೊಡಗಿಸುವುದು ಈ ಸಂಸ್ಥೆಯ ವಿಶೇಷತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net