

ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವ ನಟಿ ಜೆನಿಲಿಯಾ ಡಿಸೋಜಾ, ಕರೊನಾ ಕುರಿತಾದ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಅದೇನೆಂದರೆ, ಜೆನಿಲಿಯಾಗೆ ಕರೊನಾ ಸೋಂಕು ತಗುಲಿ ಮೂರು ವಾರಗಳೇ ಕಳೆದಿವೆಯಂತೆ!
ಈ ವಿಚಾರವನ್ನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಅವರು, ಸದ್ಯದ ಸ್ಥಿತಿ ಹೇಗಿದೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ‘ಕರೊನಾ ಸೋಂಕು ಧೃಡಪಟ್ಟು 21 ದಿನಗಳಾಗಿವೆ. ಇವತ್ತು ವರದಿ ನೆಗೆಟಿವ್ ಬಂದಿದೆ’ ಎಂದಿದ್ದಾರೆ.
ಕಳೆದ ಮೂರು ವಾರಗಳಿಂದ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್ ವಿಧಿಸಿಕೊಂಡು, ಮನೆಮಂದಿಯಿಂದ ದೂರವೇ ಉಳಿದಿದ್ದ ಜೆನಿಲಿಯಾ, ಆ 21 ದಿನಗಳನ್ನು ಕಳೆಯುವುದು ಅವರಿಗೆ ದೊಡ್ಡ ಚಾಲೆಂಜಿಂಗ್ ಆಗಿತ್ತು ಎಂದು ಅನುಭವಗಳನ್ನೂ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದುನಿಯಾ ವಿಜಯ್ಗೆ ಪುನೀತ್, ಕಿಚ್ಚನಿಗೆ ಶಿವಣ್ಣ…
ಇನ್ನು ಈ ಮೊದಲು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ಆರಾಧ್ಯಾಗೂ ಕರೊನಾ ಇರುವುದು ಖಚಿತವಾಗಿತ್ತು. ಇದೀಗ ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಕರೊನಾದಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಗಾಯಕ ಎಸ್ಪಿಬಿ ಅವರ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)