ನವೆಂಬರ್​ನಲ್ಲೇ ಹೆಣ್ಮಕ್ಕಳಿಗೆ ಅವಕಾಶ ಕೊಡಿ ಎಂದ ಸುಪ್ರೀಂ ಕೋರ್ಟ್

supreme court
supreme court
Published on

ನವದೆಹಲಿ: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್​ಡಿಎ)ಯ ಪ್ರವೇಶಕ್ಕೆ ನವೆಂಬರ್ 14ಕ್ಕೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಅಧಿಸೂಚನೆ ಪ್ರಕಟಿಸುವಾಗಲೇ ಹೆಣ್ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿದೆ. ಮೊದಲ ಬ್ಯಾಚ್​ನ ಹೆಣ್ಮಕ್ಕಳಿಗೆ 2022ರ ಮೇ ತಿಂಗಳಲ್ಲಿ ಅವಕಾಶ ನೀಡುವುದಾಗಿ ಸರ್ಕಾರ ಮಂಗಳವಾರ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿತ್ತು. ಆದರೆ, ಇದನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಹೆಣ್ಮಕ್ಕಳಲ್ಲಿ ನಾವು ಭರವಸೆ ಮೂಡಿಸಬೇಕು. ಅವರನ್ನು ನಿರಾಶರಾಗುವಂತೆ ಮಾಡಬಾರದು ಎಂದು ನ್ಯಾಯಮೂರ್ತಿಗಳಾದ ಎಸ್. ಕೆ.ಕೌಲ್ ಮತ್ತು ಬಿಆರ್ ಗವಾಯಿ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆರ್​ಐಎಂಸಿಗೆ ಹೆಣ್ಮಕ್ಕಳ ಪ್ರವೇಶ: ಡೆಹ್ರಾಡೂನ್​ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ (ಆರ್​ಐಎಂಸಿ)ಗೆ ಹೆಣ್ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿ ಎರಡು ವಾರದಲ್ಲಿ ಅಫಿಡವಿಟ್ ಸಲ್ಲಿಸಬೇಕು ಎಂದೂ ಸುಪ್ರೀಂಕೋರ್ಟ್ ಸೂಚಿಸಿದೆ. ಆರ್​ಐಎಂಸಿ ಪ್ರವೇಶ ಪರೀಕ್ಷೆ ಡಿ.18ಕ್ಕೆ ನಿಗದಿಯಾಗಿದ್ದು, ಅರ್ಜಿ ಸಲ್ಲಿಸಲು ಅ.30 ಕೊನೇ ದಿನವಾಗಿದೆ. ಹೀಗಾಗಿ ಇದನ್ನೂ ಮುಂದೂಡಬೇಕೆಂಬುದನ್ನು ಬಯಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪದ್ಮನಾಭ ಸ್ವಾಮಿ ದೇಗುಲ ಟ್ರಸ್ಟ್​ಗೆ ಹಿನ್ನಡೆ

ಇಪ್ಪತೆôದು ವರ್ಷಗಳ ಲೆಕ್ಕಪತ್ರ ಪರಿಶೋಧನೆಗೆ ವಿನಾ ಯಿತಿ ಕೋರಿದ್ದ ಕೇರಳದ ಶ್ರೀಪದ್ಮನಾಭ ಟೆಂಪಲ್ ಟ್ರಸ್ಟ್​ಗೆ ಸುಪ್ರೀಂಕೋರ್ಟ್​ನಲ್ಲಿ ಭಾರಿ ಹಿನ್ನಡೆಯಾಗಿದೆ. ಲೆಕ್ಕಪತ್ರಗಳ ಆಡಿಟ್​ನಿಂದ ವಿನಾಯಿತಿ ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಎಸ್. ರವೀಂದ್ರ ಭಟ್ ಮತ್ತು ಬೇಲ ಎಂ. ತ್ರಿವೇದಿ ಅವರಿದ್ದ ನ್ಯಾಯಪೀಠ ಬುಧವಾರ ತಳ್ಳಿಹಾಕಿದೆ. ಮೂರು ತಿಂಗಳ ಒಳಗೆ ಆಡಿಟ್ ಪೂರ್ಣಗೊಳಿಸಬೇಕು ಎಂದು ಆದೇಶಿಸಿದೆ.

ಟ್ರಸ್ಟ್ ಸಲ್ಲಿಸಿದ ಅರ್ಜಿಯಲ್ಲಿ ಮೊದಲನೆ ಮನವಿಯನ್ನು ತಿರಸ್ಕರಿಸಲಾಗಿದ್ದು, ಲೆಕ್ಕಪತ್ರಗಳ ಆಡಿಟ್ ಕೇವಲ ದೇವಸ್ಥಾನದಷ್ಟೇ ಅಲ್ಲ, ಟ್ರಸ್ಟ್​ನ ಲೆಕ್ಕಪತ್ರ ಪರಿಶೋಧನೆ ಆಗಬೇಕು. ಎರಡನೇ ಮನವಿಯನ್ನು ಪರಿಗಣಿಸಬೇಕಾದರೆ 2015ರಲ್ಲಿ ದಾಖಲಾದ ಆದೇಶದ ವರದಿಗಳನ್ನು ಪರಿಶೀಲಿಸಬೇಕಾಗಿದೆ. ಆದ್ದರಿಂದ ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಕೋವಿಡ್ ಸಂದರ್ಭದಲ್ಲಿ ಕೇರಳದ ಎಲ್ಲ ದೇವಸ್ಥಾನಗಳು ಮುಚ್ಚಿದ್ದವು. ಈ ದೇವಸ್ಥಾನದ ತಿಂಗಳ ಖರ್ಚು ವೆಚ್ಚ 1.25 ಕೋಟಿ ರೂಪಾಯಿ ಇತ್ತು. ತಿಂಗಳ ಆದಾಯ 60-70 ಲಕ್ಷ ರೂ. ಮಾತ್ರ ಇತ್ತು. ದೇವಸ್ಥಾನದ ಆಡಳಿತ ಖರ್ಚು ವೆಚ್ಚ ಸರಿದೂಗಿಸುವುದಕ್ಕೆ ಆದಾಯ ಸಾಕಾಗುತ್ತಿಲ್ಲ. ಹಣಕಾಸಿನ ಸಂಕಷ್ಟವನ್ನು ಎದುರಿಸುತ್ತಿದೆ. ಇದರ ಆಡಳಿತವನ್ನು ತಿರುವಾಂಕೂರು ರಾಜಮನೆತನ ನಡೆಸುತ್ತಿದ್ದ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಈ ಟ್ರಸ್ಟ್​ನ ಲೆಕ್ಕಪತ್ರ ಆಡಿಟ್ ನಡೆಸಬೇಕು ಎಂದು ಶ್ರೀಪದ್ಮನಾಭ ದೇವಸ್ಥಾನದ ಆಡಳಿತ ಮಂಡಳಿಯು ಸೆ.17ರಂದು ಸುಪ್ರೀಂಕೋರ್ಟ್​ಗೆ ತಿಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net