ಶಿವರಾಜ್​ಕುಮಾರ್ ಕೂಡ ಕೆಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡ್ತಾರೆ: ಕಾಂಗ್ರೆಸ್​ ಸೇರ್ಪಡೆ ಬಳಿಕ ಪತ್ನಿ ಗೀತಾ ಹೇಳಿಕೆ

Geetha Shivarajkumar (1)
Published on

ಬೆಂಗಳೂರು: ನಮ್ಮ ತಂದೆ ಬಂಗಾರಪ್ಪ ಅವರು ಇದ್ದ ಪಕ್ಷವನ್ನು ನಾನು ಸೇರಿದ್ದೇನೆ. ಪಕ್ಷಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದು ನಟ ಶಿವರಾಜ್​ಕುಮಾರ್​ ಅವರ ಧರ್ಮಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಹೇಳಿದರು.

ಕಾಂಗ್ರೆಸ್​ ಪಕ್ಷ ಸೇರ್ಪಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ ಶಿವರಾಜ್​ಕುಮಾರ್, ಐತಿಹಾಸಿಕ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ನನ್ನ ತಮ್ಮ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದಾಗಿನಿಂದ ನಾನು ಕಾಂಗ್ರೆಸ್ ಸೇರಿದ್ದೆ. ಇದೀಗ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.

ನಮ್ಮ ತಮ್ಮನ ಪರವಾಗಿ ಪ್ರಚಾರ ಮಾಡಿದ್ದೇನೆ. ಶಿವರಾಜ್​ಕುಮಾರ್ ಕೂಡ ಕೆಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ. ಶೂಟಿಂಗ್​ನಲ್ಲಿ ಬ್ಯೂಸಿ ಇರುವ ಕಾರಣ ಸದ್ಯಕ್ಕೆ ಪ್ರಚಾರದಲ್ಲಿ ಭಾಗಿಯಾಗಿಲ್ಲ. ನಾನು ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ. ಪಕ್ಷ ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ. ಕುಮಾರ ಬಂಗಾರಪ್ಪ ಬಗ್ಗೆ ನಾನು ಮಾತನಾಡಲ್ಲ ಎಂದರು.

ಬಿಎಸ್​ವೈ ವಿರುದ್ಧ ಸೋಲು

ಗೀತಾ ಶಿವರಾಜ್​ಕುಮಾರ್​ ಅವರು 2014 ರಲ್ಲಿ ಜೆಡಿಎಸ್​ ಪಕ್ಷದಿಂದ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಫರ್ಧೆ ಮಾಡಿದ್ದರು. ಬಿಎಸ್​ವೈ ವಿರುದ್ಧ ಸ್ಪರ್ಧಿಸಿದ್ದ ಅವರು ಸೋಲುಂಡಿದ್ದರು. ಆಗ ಸಹೋದರ ಮಧು ಬಂಗಾರಪ್ಪ ಅವರು ಜೆಡಿಎಸ್​ ಪಕ್ಷದಲ್ಲಿದ್ದರು. ಇದೀಗ ಇಬ್ಬರು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net