ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಭಾರತವು ಶೇಕಡ 45ರಷ್ಟು ಪಾಲು ಹೊಂದಿದ್ದು, 140ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ. ಆದರೆ, ಈ ಬಿಕ್ಕಟ್ಟಿನಿಂದಾಗಿ 2026ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಅಕ್ಕಿ ರಫ್ತು ಶೇ.7.5ರಷ್ಟು ಕುಸಿದು 11.53 ಬಿಲಿಯನ್ ಡಾಲರ್‌ಗೆ ತಲುಪಿದೆ. "ಭತ್ತದ ಖರೀದಿ, ಗಿರಣಿ ಸಂಸ್ಕರಣೆ, ಪ್ಯಾಕಿಂಗ್ ಮತ್ತು ಸಾಗಣೆ ವೆಚ್ಚಕ್ಕಾಗಿ ರಫ್ತುದಾರರು ಭಾರಿ ಪ್ರಮಾಣದ ಬಂಡವಾಳ ಹೂಡಿದ್ದಾರೆ. ಈಗ ಬಂದರುಗಳಲ್ಲಿ ಸರಕುಗಳು ವಾರಗಟ್ಟಲೆ ನಿಂತಿರುವುದರಿಂದ ಹಣಕಾಸಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದೆ. ಬ್ಯಾಂಕ್‌ಗಳ ಬಡ್ಡಿ ಹೆಚ್ಚಾಗುತ್ತಿದ್ದು, ರಫ್ತುದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ" ಎಂದು ಬಾಸುಮತಿ ಅಕ್ಕಿ ಗಿರಣಿ ಮಾಲೀಕರು ಮತ್ತು ರಫ್ತುದಾರರ ಸಂಘ (ಬಿಆರ್‌ಎಂಇಎ)ದ ಉಪಾಧ್ಯಕ್ಷ ರಂಜಿತ್ ಸಿಂಗ್ ಜೋಸನ್ ಕಳವಳ ವ್ಯಕ್ತಪಡಿಸಿದ್ದಾರೆ.