

ಬೆಂಗಳೂರು: ಬಿಗ್ಬಾಸ್ (Bigg Boss) 11ನೇ ಆವೃತ್ತಿ ಆರಂಭವಾಗಿ 10 ವಾರಗಳಾಗುತ್ತ ಬಂದಿದ್ದು, ವೀಕ್ಷಕರು ನಿರೀಕ್ಷೆ ಮಾಡದ ಟ್ವಿಸ್ಟ್ಗಳು ಸಿಗುತ್ತಿವೆ. ಈ ವಾರ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿ ಗೌತಮಿ (Gauthami Jadhav) ಆಯ್ಕೆಯಾಗಿದ್ದು, ಮೋಕ್ಷಿತಾ ಮಾಡಿದ ಆ ಒಂದು ತಪ್ಪಿನಿಂದ ಗೌತಮಿಗೆ ಮನೆಯ ಕ್ಯಾಪ್ಟನ್ ಆಗುವ ಅವಕಾಶ ದೊರೆತ್ತಿದ್ದು, ಮುಂದಿನ ದಿನಗಳಲ್ಲಿ ಇದು ಪರಿಣಾಮಕಾರಿಯಾಗಬಹುದು ಎಂದು ಹೇಳಲಾಗಿದೆ.
ಈ ವಾರ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಿದ್ದ ಬಿಗ್ಬಾಸ್ (Bigg Boss) ಮನೆಯನ್ನು ವಾಹಿನಿಯಾಗಿ ಪರಿವರ್ತಿಸಿದ್ದರು. ಆ ಬಳಿಕ ಸ್ಪರ್ಧಿಗಳನ್ನು ಎರಡು ಬಣಗಳಾಗಿ ವಿಂಗಡಿಸಲಾಗಿತ್ತು. ಇದಾದ ಬಳಿಕ ನಡೆದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮೋಕ್ಷಿತಾ ಹಾಗೂ ಗೌತಮಿ ಒಂದು ತಂಡವಾಗಿ ಆಡಬೇಕಾಗಿತ್ತು. ಆದರೆ, ಮನಸ್ತಾಪದ ಕಾರಣದಿಂದಾಗಿ ಗೌತಮಿ ಜತೆ ಆಡಲು ಮೋಕ್ಷಿತಾ ನಿರಾಕರಿಸಿದ್ದರು. ಇದೀಗ ಮೋಕ್ಷಿತಾ ಅವರ ಈ ಒಂದು ತಪ್ಪು ಗೌತಮಿ ಅವರನ್ನು ಮನೆಯ ಕ್ಯಾಪ್ಟನ್ ಆಗುವಂತೆ ಮಾಡಿದ್ದು, ಒಂದು ಕಡೆ ಸಂಭ್ರಮ, ಮತ್ತೊಂದು ಕಡೆ ಸಂಘರ್ಷ ಹೆಸರಿನ ಪ್ರೋಮೋ ಸಖತ್ ವೈರಲ್ ಆಗಿದೆ.
ಗೌತಮಿ ಗೆದ್ದು ನಾನು ಕ್ಯಾಪ್ಟನ್ ಆಗಬೇಕೆಂಬುದು ಯಾವತ್ತೂ ಇಲ್ಲ ಎಂದು ಮೋಕ್ಷಿತಾ ಹೇಳಿದ್ದರು. ಈ ಸಂಬಂಧ ಬಿಗ್ ಬಾಸ್ ಮೋಕ್ಷಿತಾಗೆ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಇದಕ್ಕೆ ದೊಡ್ಡ ದಂಡ ತೆತ್ತಬೇಕಾಗುತ್ತದೆ ಎಂದರು. ಕೊನೆಗೆ ಮೋಲ್ಷಿತಾ ಬದಲಾಗಿ ಓರ್ವ ಬೇರೆ ಆಟಗಾರನನ್ನು ಎದುರಾಳಿ ತಂಡದಿಂದ ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ಆಗ ಎಲ್ಲರೂ ಗೌತಮಿ ಅವರನ್ನು ಆಯ್ಕೆ ಮಾಡಿದರು. ಈಗ ಮನೆಯ ಕ್ಯಾಪ್ಟನ್ ಆಗಿ ಗೌತಮಿ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮೋಕ್ಷಿತಾರ ಈ ನಡೆ ಅವರಿಗೆ ಮುಳುವಾಗುವ ಸಾಧ್ಯತೆ ಇದೆ.
ನಾವು ನೋಡಿರುವಂತೆ ಸಾಮಾನ್ಯವಾಗಿ ಬಿಗ್ಬಾಸ್ ಮನೆಯಲ್ಲಿ ಅವಕಾಶಗಳು ಹುಡುಕಿಕೊಂಡು ಬರುವುದು ತೀರಾ ಕಡಿಮೆ. ಒಂದು ವೇಳೆ ಸಿಕ್ಕರೂ ಅದು ಸ್ಫರ್ಧಿಗಳ ಲಕ್ ಎಂದೇ ಹೇಳಬಹುದು. ಇದೀಗ ಮೋಕ್ಷಿತಾಗೆ ಬಂದಿದ್ದ ಅವಕಾಶ ಗೌತಮಿ ಪಾಲಾಗಿದ್ದು, ವಾರಾಂತ್ಯದಲ್ಲಿ ನಿರೂಪಕ ಕಿಚ್ಚ ಸುದೀಪ್ಗೆ ಈ ವಿಚಾರ ಪ್ರಸ್ತಾಪಿಸುವುದು ಪಕ್ಕಾ ಆಗಿದೆ. ವೀಕ್ಷಕರು ಈ ಸಂಚಿಕೆಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.