Border-Gavaskar ಟ್ರೋಫಿಯ ಎರಡನೇ ಪಂದ್ಯಕ್ಕೆ ಮಳೆ ಭೀತಿ; ಅಡಿಲೇಡ್​ ಪಿಚ್​ ಯಾರಿಗೆ ಸಹಕಾರಿ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Adelaide Oval
Published on

ಅಡಿಲೇಡ್​: ಇಲ್ಲಿನ ಅಡಿಲೇಡ್​ ಓವಲ್​ ಮೈದಾನದಲ್ಲಿ ಬಾರ್ಡರ್​-ಗವಾಸ್ಕರ್​ ಟ್ರೋಫಿಯ (Border-Gavaskar Trophy) ಅಹಿರ್ನಿಶಿ ಟೆಸ್ಟ್​ ಪಂದ್ಯಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ತಯಾರಿ ನಡೆಸಿದ್ದು, ಈ ಪಂದ್ಯವನ್ನು ಪಿಂಕ್​ಬಾಲ್​ನಲ್ಲಿ ಆಡಲಾಗುತ್ತಿದ್ದು, ಈ ಹಿಂದೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಕಂಡಿತ್ತು. ಇನ್ನೂ ಸರಣಿಯ ಎರಡನೇ ಪಂದ್ಯ ನಡೆಯುತ್ತಿರುವ ಅಡಿಲೇಡ್​ ಕ್ರೀಡಾಂಗಣದ ಪಿಚ್​ ಹಾಗೂ ಅಲ್ಲಿನ ವಾತಾವರಣ ಹೇಗಿರಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಪರ್ತ್​ ಟೆಸ್ಟ್​​ನಲ್ಲಿ ಭರ್ಜರಿ ಗೆಲುವು ಕಂಡಿರುವ ಟೀಮ್​ ಇಂಡಿಯಾ (Team India) ಎರಡನೇ ಪಂದ್ಯದಲ್ಲೂ ತನ್ನ ಓಟವನ್ನು ಮುಂದುವರೆಸಲು ಸಜ್ಜಾಗಿದೆ. ಆದರೆ, ಅಡಿಲೇಡ್​ನಲ್ಲಿ ಕಳೆದ ಬಾರಿ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ 36 ರನ್​ಗಳಿಗೆ ಆಲೌಟ್​ ಆಗುವ ಭಾರೀ ಮುಖಭಂಗವನ್ನು ಅನುಭವಿಸಿತ್ತು. ಹಳೇ ಸೇಡನ್ನು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಟೀಮ್​ ಇಂಡಿಯಾ ತಯಾರಿ ನಡೆಸುತ್ತಿರುವ ಮಧ್ಯೆಯೇ  ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡುವ ಆತಂಕ ಎದುರಾಗಿದೆ.​

ಹವಾಮಾನ ವರದಿಯ ಪ್ರಕಾರ, ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲ ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಶೇ.88 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ವರದಿ ಪ್ರಕಟಿಸಿದೆ. ಮಳೆಯಿಂದಾಗಿ ಮೊದಲ ದಿನದಾಟಕ್ಕೆ ಅಡಚಣೆ ಉಂಟಾಗಬಹುದು ಎಂದು ಹೇಳಲಾಗಿದ್ದು, ಮೋಡ ಕವಿದ ವಾತಾವರಣವಿದ್ದರೆ ಇಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ ಎಂದು ಹೇಳಲಾಗಿದೆ. ಅಂತಿಮವಾಗಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Adelaide Oval Pitch

ಇನ್ನೂ ಪಿಚ್​ ವಿಚಾರಕ್ಕೆ ಬರುವುದಾದರೆ, ಪಿಚ್‌ನಲ್ಲಿ ಆರು ಎಂಎಂ ಹುಲ್ಲು ಇರಲಿದ್ದು, ಇದು ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಚೆಂಡು ಸ್ವಿಂಗ್ ಮತ್ತು ಸೀಮ್ ಆಗುತ್ತದೆ. ಆದಾಗ್ಯೂ, ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗೆ ಸಮಾನ ಲಾಭ ಸಿಗುವಂತೆ ಸಮತೋಲನದ ಪಿಚ್​ ಮಾಡಿರುವುದಾಗಿ ಕ್ಯೂರೇಟರ್​ ಡೇಮಿಯನ್​ ಮಾಹಿತಿ ನೀಡಿದ್ದಾರೆ.

ಇನ್ನೂ ಅಡಿಲೇಡ್​ ಮೈದಾನದಲ್ಲಿ ಭಾರತದ ದಾಖಲೆ ನೋಡುವುದಾದರೆ ಭಾರತ ತಂಡ ಇಲ್ಲಿ ಒಟ್ಟು 13 ಟೆಸ್ಟ್​ ಪಂದ್ಯಗಳನ್ನು ಆಡಿದ್ದು, 8ರಲ್ಲಿ ಸೋಲು ಕಂಡಿದೆ. 3 ಪಂದ್ಯಗಳು ಡ್ರಾಗೊಂಡಿದ್ದು, 2ರಲ್ಲಿ ಮಾತ್ರ ಟೀಮ್​ ಇಂಡಿಯಾ ಗೆಲುವು ಕಂಡಿದೆ.

ಅಡಿಲೇಡ್‌ನಲ್ಲಿ ಇದುವರೆಗೆ 82 ಪಂದ್ಯಗಳು ನಡೆದಿವೆ. 82ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 40 ಬಾರಿ ಗೆದ್ದರೆ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ 23 ಬಾರಿ ಗೆದ್ದಿದೆ. 19 ಪಂದ್ಯಗಳು ಡ್ರಾ ಆಗಿವೆ. ಇಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 379, ಎರಡನೇ ಇನಿಂಗ್ಸ್ 346, ಮೂರನೇ ಇನ್ನಿಂಗ್ಸ್ 268 ಮತ್ತು ಕೊನೆಯ ಇನಿಂಗ್ಸ್‌ನ ಸರಾಸರಿ ಸ್ಕೋರ್ 208 ರನ್ ಗರಿಷ್ಠ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net