

ತೆಲಂಗಾಣ: ( Six Generations Of Families ) ಸೆಲ್‌ಫೋನ್‌ಗಳಿಗೆ ಸೀಮಿತವಾಗಿರುವ ಯಾಂತ್ರಿಕ ಜೀವನದಲ್ಲಿ ಇತ್ತೀಚೆಗೆ ಎಲ್ಲಾ ಸಂಬಂಧ, ಬಂಧಗಳು ಕಣ್ಮರೆಯಾಗುತ್ತಿದೆ. ಇಂದು ಆರು ತಲೆಮಾರಿನ 141 ಕುಟುಂಬಗಳು ಒಂದೇ ವೇದಿಕೆಯಲ್ಲಿ ಭೇಟಿಯಾಗಿದೆ. ಈ ಕುರಿತಾದ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೂರ್ಯಪೇಟ್ ಜಿಲ್ಲೆಯ ನೆರೆದುಚಾರ್‌ನ ರಾಚಕೊಂಡ ವೀರಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಮೂವರು ಗಂಡು ಮತ್ತು ನಾಲ್ವರು ಪುತ್ರಿಯರಿದ್ದಾರೆ. ವೀರಯ್ಯ ಮತ್ತು ಲಕ್ಷ್ಮಮ್ಮ ಅವರು ಕಿರಾಣಿ ಅಂಗಡಿಯನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಈ ದಂಪತಿಯ ಆರು ಮಕ್ಕಳ ಎಲ್ಲಾ ಮಕ್ಕಳು-ಅಳಿಯ, ಸೊಸೆಯರು, ಮೊಮ್ಮಕ್ಕಳು, ಮರಿಮಕ್ಕಳು ಹೀಗೆ 411 ಜನರಿದ್ದಾರೆ.
6 ತಲೆ ಮಾರಿನ 411 ಜನರು ಇರುವ ಈ ಕುಟುಂಬದ ಸದಸ್ಯರು ಒಟ್ಟಿಗೆ ಜೀವನ ನಡೆಸುತ್ತಿಲ್ಲ. ಅವರಲ್ಲಿ ಹಲವರು ವ್ಯಾಪಾರ ಮಾಡುತ್ತಿದ್ದರೆ, ಅವರಲ್ಲಿ ಹಲವರು ಉದ್ಯೋಗಕ್ಕಾಗಿ ವಿದೇಶ ಮತ್ತು ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ.
ರಾಚಕೊಂಡ ವೀರಯ್ಯ ಮತ್ತು ಲಕ್ಷ್ಮಮ್ಮ ಏಳು ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಸ್ಮರಣಾರ್ಥ ಮತ್ತಪಲ್ಲಿಯಲ್ಲಿ ವಂಶಾವಳಿಯ ಆಧ್ಯಾತ್ಮಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುಟುಂಬದ 367 ಜನರು ಭಾವಪೂರ್ಣ ಸಮಾರಂಭದಲ್ಲಿ ಪಾಲ್ಗೊಂಡರು.
ಅಭೂತಪೂರ್ವ ಒಕ್ಕೂಟದ ಮೂಲವಾದ ಕುಲದ ಪ್ರಮುಖ ದಂಪತಿಗೆ ಗೌರವ ಸಲ್ಲಿಸಿದರು. ಮೂರು ತಿಂಗಳಿಂದ ಎಲ್ಲರಿಗೂ ಮಾಹಿತಿ ನೀಡಿ ಅಗತ್ಯ ವ್ಯವಸ್ಥೆ ಕಲ್ಪಿಸಿ ಈ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿದ್ದೇವೆ ಎನ್ನುತ್ತಾರೆ ಕುಟುಂಬದ ಸದಸ್ಯರಲ್ಲಿ ಒಬ್ಬರು.