ಬಾಂಗ್ಲಾದೇಶ ಮಸೀದಿಯಲ್ಲಿ ಗ್ಯಾಸ್​ ಪೈಪ್​ಲೈನ್ ಸ್ಫೋಟ: ಕನಿಷ್ಠ 11 ಸಾವು, ಅನೇಕರಿಗೆ ಗಾಯ

bangladesh-explosion
Published on

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ನಾರಾಯಣಗಂಜ್​ನಲ್ಲಿರುವ ಬೈತಸ್​ ಸಲಾಟ್​ ಜಾಮೆ ಮಸೀದಿಯಲ್ಲಿ ಶುಕ್ರವಾರ ರಾತ್ರಿ ಪ್ರಾರ್ಥನೆ ಮುಗಿಯುತ್ತಿದ್ದಂತೆ ಗ್ಯಾಸ್​ ಪೈಪ್​ಲೈನ್​ ಸ್ಫೋಟಗೊಂಡು ಕನಿಷ್ಠ 11 ಜನ ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಒಬ್ಬ ಹುಡು ಮತ್ತು 10 ಇತರರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಕನಿಷ್ಠ 37 ಜನ ಶೇಕಡ 90 ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸ್ಫೋಟದ ತೀವ್ರತೆಗೆ ಮಸೀದಿಗೆ ಅಳವಡಿಸಿದ್ದ ಆರು ಹವಾನಿಯಂತ್ರಕಗಳು ಸ್ಫೋಟಗೊಂಡಿವೆ. ಘಟನೆಗೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ಪರಿಹಾರ ಕಾರ್ಯಗಳು ಮುಂದುವರಿದಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net