ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ್ ಮಹಾಂತ ಆಸ್ಪತ್ರೆಗೆ ದಾಖಲು

Prafulla-Kumar-Mahanta
Published on

ಗುವಾಹಟಿ: ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ್ ಮಹಾಂತ ಅವರು ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ಸೋಮ್ ಗಣ ಪರಿಷದ್​ನ ಹಿರಿಯ ನಾಯಕ ಮಹಾಂತ ಅವರಿಗೆ ಬ್ರೇನ್ ಸ್ಟ್ರೋಕ್ ಉಂಟಾದ ಕಾರಣ ಡೌನ್​ಟೌನ್​ ಹಾಸ್ಪಿಟಲ್​ ಗೆ ದಾಖಲಿಸಲಾಗಿದೆ.

ಡೌನ್​ಟೌನ್ ಹಾಸ್ಪಿಟಲ್​ನ ಐಸಿಯುನಲ್ಲಿ ಮಹಾಂತ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಡಾಕ್ಟರ್​ಗಳ ತಂಡ ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದು, ಸದ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net