

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಶಿಕ್ಷಕರ ದಿನವಾದ ಇಂದು ರಾಷ್ಟ್ರೀಯ ಶಿಕ್ಷಕ ಪುರಸ್ಕಾರವನ್ನು ಘೋಷಿಸುತ್ತಿದ್ದಾರೆ. ಪ್ರತಿಭಾವಂತ ಶಿಕ್ಷಕರನ್ನು ಪ್ರತಿವರ್ಷದಂತೆ ಈ ವರ್ಷವೂ ಗುರುತಿಸ ಗೌರವಿಸಲಾಗುತ್ತಿದ್ದು, ಈ ಸಲದ ಕಾರ್ಯಕ್ರಮ ವರ್ಚುವಲ್ ರೂಪದಲ್ಲಿ ನಡೆಯುತ್ತಿದೆ. ಇದರ ನೇರ ಪ್ರಸಾರ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ ಮಾಡಿ.
ಕರ್ನಾಟಕದ ಕಲಬುರಗಿಯ ಅಫ್ಜಲಪುರದ ಬಂದರವಾಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ ಅವರು ಶಾಲೆಯಲ್ಲಿ ಮಕ್ಕಳಿಗೆ ಸೈನ್ಸ್ ಎಜುಕೇಶನ್ನಲ್ಲಿ ಪ್ರಾಯೋಗಿಕ ಪಾಠ ಹೇಳುವ ಮೂಲಕ ಬದಲಾವಣೆ ತಂದಿದ್ದಾರೆ. ಈ ಸಲದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಅವರೂ ಭಾಜನರಾಗಿದ್ದಾರೆ. (ಪಿಐಬಿ)