

ಬೆಂಗಳೂರು: ಸಂಜೀವಿನಿನಗರದಲ್ಲಿ ನಡೆದ ಅಭಿಯಾನದಲ್ಲಿ ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಸದಸ್ಯರು ಹೇರ್ ಕಲರಿಂಗ್ ಮಾಡಿಸಿಕೊಂಡರು.
ಗಾರ್ನಿಯರ್ ಕಂಪನಿ ಪರಿಣಿತರು ನೇರವಾಗಿ ಕಲರಿಂಗ್ ಮಾಡಿಸಿಕೊಳ್ಳೋಕೆ ಬಂದಂತಹ ಗ್ರಾಹಕರಿಗೆ ಹೇರ್ ಕಲರಿಂಗ್ ಮಾಡಿದರು. ಅಭಿಯಾನ ನಿಮಿತ್ತ ಗ್ರಾಹಕರಿಗೆ ಉಚಿತ ಹೇರ್ ಕಲರಿಂಗ್ ಸೇವೆಯನ್ನ ನೀಡಲಾಯಿತು.
ಸಂಜೀವಿನಿನಗರದಲ್ಲಿ ಆಯೋಜಿಸಿದ್ದ 'ಹೇರ್ ಕಲರಿಂಗ್' ಅಭಿಯಾನದಲ್ಲಿ ನೂರಾರು ಗ್ರಾಹಕರು ಭಾಗಿಯಾಗಿ ಸದ್ಬಳಕೆ ಮಾಡಿಕೊಂಡಿದ್ದು, ಎನ್ಟಿಐ ಲೇಔಟ್‌ನಲ್ಲಿ 'ಹೇರ್ ಕಲರ್ ಸ್ಯಾಚೆಟ್' ಆಯೋಜನೆ ವಿತರಿಸಲಾಯಿತು.
ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಅಧ್ಯಕ್ಷೆ ರೇಣುಕಾ ಶಿವರಾಜ್, ಪದಾಧಿಕಾರಿಗಳು ಮತ್ತು ಸದಸ್ಯರು ಹೇರ್ ಕಲರಿಂಗ್ ಮಾಡಿಸಿಕೊಂಡರು.
ದೇಶದ ಖ್ಯಾತ ಹೇರ್ ಕಲರಿಂಗ್ ಕಂಪನಿಯಾದ 'ಗಾರ್ನಿಯರ್' ಈ ಅಭಿಯಾನಕ್ಕಾಗಿ ವಿಶೇಷ ವಾಹನನ್ನೂ ಹೊಂದಿದ್ದು, ಈವರೆಗೂ ಬಹುತೇಕ ನಗರಗಳಲ್ಲಿ ಜನರು ಈ ಅಭಿಯಾನದ ಸದುಪಯೋಗವನ್ನ ಪಡೆದುಕೊಂಡಿದ್ದಾರೆ.
ಕೇವಲ ಗ್ರಾಹಕರು ಮಾತ್ರವಲ್ಲ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳೂ ಉಚಿತ ಅಭಿಯಾನದ ಕುರಿತಂತೆ ವಿಡಿಯೋಗಳನ್ನ ಮಾಡಿ ತಮ್ಮ ಇನ್ಸ್ಟಾಗ್ರಾಂ ಹಾಗು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಉಚಿತ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನದ ಸದುಪಯೋಗ ಪಡೆದುಕೊಂಡಂತಹ ಅನೇಕರು ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಸದ್ಯ ಜುಲೈ ತಿಂಗಳ ಅಂತ್ಯದವರೆಗೂ ಈ ಅಭಿಯಾನ ಮುಂದುವರೆಯಲಿದ್ದು, ನೀವೂ ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಬೇಡಿ.