

Recipe: ಸಂಜೆ ತಿಂಡಿಗಳು ಭಾರತೀಯ ಮನೆಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿವೆ. ಸಂಜೆ 4 ರಿಂದ 6 ಗಂಟೆಯ ನಡುವೆ ಚಹಾ ಅಥವಾ ಕಾಫಿಯೊಂದಿಗೆ ತಿಂಡಿ ತಿನ್ನಲು ಆಹಾರ ಪ್ರಿಯರು ಆಸೆ ಪಡುತ್ತಾರೆ. ಜನಪ್ರಿಯ ತಿಂಡಿಗಳಲ್ಲಿ ಪಕೋಡ, ಸಮೋಸ, ಉಪ್ಪಿಟ್ಟು, ದೋಸೆ, ವಡೆ ಈ ರೀತಿಯ ತಿಂಡಿಗಳನ್ನು ಆದಷ್ಟು ಜನರು ಟೇಸ್ಟ್ ಮಾಡಿರುತ್ತಾರೆ.ಈ ಎಲ್ಲಾ ತಿಂಡಿಗಳನ್ನು ಬಿಟ್ಟು, ದಿಢೀರ್ ಆಗಿ ಮಾಡುವ ಖಾದ್ಯ ಎಂದರೆ ಗಾರ್ಲಿಕ್ ಬ್ರೆಡ್ ಪಿಜ್ಜಾ ರೆಸಿಪಿ. ಇದನ್ನು ಒಮ್ಮೆ ಮಾಡಿದರೆ ಪದೇ ಪದೇ ಬೇಕೆನ್ನಿಸುತ್ತದೆ.
* ಗಾರ್ಲಿಕ್ ಬ್ರೆಡ್ ಪಿಜ್ಜಾ
* 3-4 ಚಮಚ ಬೆಣ್ಣೆ
* 3-4 ಎಸಳು ಬೆಳ್ಳುಳ್ಳಿ
* 1 ಚಮಚ ಒರಿಗಾನೊ
* 1/2 ಚಮಚ ಮೆಣಸಿಕಕಾಯಿ ಫ್ಲೇಕ್ಸ್ (ಬೇಕಾದಿಲ್ಲ)
* 1/2 ಚಮಚ ಒಣಗಿದ ತುಳಸಿ (ಬೇಕಾದಿಲ್ಲ)
* 4-5 ಚಮಚ ಪಿಜ್ಜಾ ಸಾಸ್
* 1 ಕಪ್ ಮೊಝಾರೆಲ್ಲಾ ಚೀಸ್
* 1/4 ಕಪ್ ಈರುಳ್ಳಿ
* 1/4 ಕಪ್ ಕಾರ್ನ್
* 1/4 ಕಪ್ ಟೊಮಟೊ
* ಉಪ್ಪು - ರುಚಿಗೆ ತಕ್ಕಷ್ಟು
ಮೊದಲು ಒಂದು ಬಟ್ಟಲನ್ನು ತೆಗೆದುಕೊಳ್ಳಿ ಅದಕ್ಕೆ ಬೆಣ್ಣೆಯನ್ನು ಕರಗಿಸಿ, ತುರಿದ ಬೆಳ್ಳುಳ್ಳಿ, ಒರಿಗಾನೊ, ಚಿಲ್ಲಿ ಫ್ಲೇಕ್ಸ್, ಮತ್ತು ಒಣಗಿದ ತುಳಸಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ. ನಂತರ ಬ್ರೆಡ್ ಗಳನ್ನು ತೆಗೆದುಕೊಳ್ಳಿ ಅದಕ್ಕೆ ಗಾರ್ಲಿಕ್ ಬೆಣ್ಣೆಯ ಮಿಶ್ರಣವನ್ನು ಸವರಬೇಕು ನಂತರ ಈ ಬ್ರೆಡ್ ಮೇಲೆ ಪಿಜ್ಜಾ ಸಾಸ್, ತುರಿದ ಮೊಝಾರೆಲ್ಲಾ ಚೀಸ್, ಕ್ಯಾಪ್ಸಿಕಂ, ಈರುಳ್ಳಿ, ಕಾರ್ನ್, ಟೊಮೇಟೊ ಸೇರಿಸಿ.
ನಂತರ ಸ್ವಲ್ಪ ಒರಿಗಾನೊ, ಚಿಲ್ಲಿ ಫ್ಲೇಕ್ಸ್, ಮತ್ತು ಒಂದು ಚಿಟಿಕೆ ಉಪ್ಪನ್ನು ಸೇರಿಸಿ ಬ್ರೆಡ್ ರೆಡಿಮಾಡಿಟ್ಟುಕೊಳ್ಳಿ. ನಂತರ ಓವನ್ ಅನ್ನು 200°C (390°F) ಗೆ ಕಾಯಿಸಿ ಈ ಮಾಡಿದ ಗಾರ್ಲಿಕ್ ಬ್ರೆಡ್ನ್ನು ಬೇಯಿಸಿ. ನಂತರ ಬಿಸಿ-ಬಿಸಿಯಾಗಿ ಸವಿಯಿರಿ. (ಏಜೆನ್ಸೀಸ್)