

Box office: ಭಾರೀ ನಿರೀಕ್ಷೆ ಮೇರೆಗೆ ಬಿಡುಗಡೆಯಾದ ವಾರ್-2 ಮತ್ತು ಕೂಲಿ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿಗೆ ಇಳಿದಿವೆ. ಇನ್ನು ಮೊದಲ ದಿನ ಬಿಡುಗಡೆಗೊಂಡ ಕೂಲಿ ಚಿತ್ರ ತನ್ನ ಗಳಿಕೆಯಲ್ಲಿ ಭಾರೀ ಏರಿಕೆ ಕಂಡರೆ, ವಾರ್ ಚಿತ್ರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿ ಹಿಂದುಳಿದಿದೆ. ಆದಾಗ್ಯೂ, ಎರಡು ಚಿತ್ರಗಳು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುವುದರಿಂದ , ಎರಡನೇ ದಿನ ಏನಾಗಲಿದೆ ಎಂದು ನೋಡಬೇಕಾಗಿದೆ.
ಎರಡನೇ ದಿನದಲ್ಲಿ 2 ಚಲನಚಿತ್ರಗಳ ಬುಕಿಂಗ್ ಟ್ರೆಂಡ್ನಲ್ಲಿ ವಾರ್-2 ಮುಂಚೂಣಿಯಲ್ಲಿತ್ತು. ಕೂಲಿ ಗಂಟೆಗೆ 40 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟದೊಂದಿಗೆ ಗಗನಕ್ಕೇರುತ್ತಿದ್ದರೆ, ವಾರ್ 2 ಗಂಟೆಗೆ 50-60 ಸಾವಿರ ಟಿಕೆಟ್ ಮಾರಾಟವಾದ ಮೂಲಕ ಅಚ್ಚರಿಗೊಳಿಸಿದೆ.
ಹಿಂದಿ ಮಾರುಕಟ್ಟೆಯಿಂದ ಬಂದ ಬೆಳವಣಿಗೆಯೇ ಈ ಅನಿರೀಕ್ಷಿತ ಮುನ್ನಡೆಗೆ ಪ್ರಮುಖ ಕಾರಣ. ದಕ್ಷಿಣ ಮರುಕಟ್ಟೆಯಲ್ಲಿ ಕೂಲಿ ಹವ ಮುಂದುವರೆದಿದ್ದು, ಒಟ್ಟಾರೆ ಬುಕಿಂಗ್ನಲ್ಲಿ ವಾರ್-2 ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ರಜನಿಕಾಂತ್ ಅವರ ಕೂಲಿ ಮೊದಲ ದಿನ ಭರ್ಜರಿ ಕಲೆಕ್ಷನ್ ಆಗಿದೆ ಎಂದು ಸಾಬೀತಾಗಿದೆ. ಇನ್ನು ಈ ಸಿನಿಮಾ ಮೊದಲ ದಿನವೇ 145 ಕೋಟಿಗೂ ಹೆಚ್ಚು ಗಳಿಸುವ ಸಾಧ್ಯತೆ ಹೆಚ್ಚಿದ್ದರೂ ಅಂತಿಮ ಆಫ್‌ಲೈನ್ ಅಂಕಿಅಂಶಗಳು ನಿರೀಕ್ಷೆಗಳನ್ನು ಮೀರಿದರೆ 150 ಕೋಟಿ ರೂಗಳಿಗೆ ಏರುವ ಸಾಧ್ಯತೆ ಹೆಚ್ಚಿದೆ.
ಈ ಯುದ್ಧದಲ್ಲಿ ಯಾವ ಚಿತ್ರ ಗೆಲ್ಲುತ್ತದೆ ಎಂದು ನೋಡಲು, ಎರಡನೇ ದಿನದ ಕಲೆಕ್ಷನ್‌ಗಾಗಿ ಕಾದು ನೋಡಬೇಕಾಗಿದೆ.(ಏಜೆನ್ಸೀಸ್)