

ಕೋಲಾರ: ರಾಜಕಾಲುವೆ ಸೇರಿ ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯದ ರಾಶಿ, ಡಾಂಬರು ಕಿತ್ತಿರುವ ರಸ್ತೆಯುದ್ದಕ್ಕೂ ಗುಂಡಿಗಳು, ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು, ಆದರೂ ಕ್ಯಾರೇ ಎನ್ನದ ನಗರಸಭೆ. ಇವೆಲ್ಲವನ್ನೂ ಸಹಿಸಿಕೊಂಡೇ ಆಕ್ರೋಶ ವ್ಯಕ್ತಪಡಿಸುವ ಜನತೆ ! ಇದು ಕೋಲಾರ ನಗರದ ಶೋಚನೀಯ ಸ್ಥಿತಿ.
ಈ ಹಿಂದೆ ಸ್ವಚ್ಛನಗರಿ ಎಂಬ ಖ್ಯಾತಿ ಪಡೆದಿದ್ದ ನಗರವೂ ಇತ್ತೀಚಿನ ದಿನಗಳಲ್ಲಿ ಸ್ಥಳಿಯಾಡಳಿತದ ರ್ನಿಲಕ್ಷ$್ಯದಿಂದಾಗಿ ನಗರದ ಎಲ್ಲೆಡೆ ನೈರ್ಮಲ್ಯ ಕೊರತೆ ಎದುರಿಸುವಂತಾಗಿದೆ. ನಗರದ ರಾಜಕಾಲುವೆಗಳು, ಚರಂಡಿ, ರಸ್ತೆಗಳಲ್ಲಿ ಸ್ವಚ್ಛತೆ ಹದಗೆಟ್ಟಿದ್ದು ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ರಾಜಕಾಲುವೆ ಸೇರುತ್ತಿದೆ ತ್ಯಾಜ್ಯ: ಈ ಹಿಂದೆ ಕೋಲಾರಮ್ಮನ ಕೆರೆಗೆ ನಗರದ ವಿವಿಧೆಡೆಯಿಂದ ಹರಿದು ಬರುವ ತ್ಯಾಜ್ಯ ನಿರ್ವಹಣೆಗಾಗಿ ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಕಾಲುವೆಗಳನ್ನು ಸ್ವಚ್ಛಗೊಳಿಸಿ, ಎರಡೂ ಬದಿಗಳಿಗೆ ತಂತಿಬೇಲಿ ಅಳವಡಿಸಿದ್ದರು. ಈಗ ತಂತಿಬೇಲಿಯನ್ನು ಹರಿದು ಎಂದಿನಂತೆ ತ್ಯಾಜ್ಯ ಎಸೆಯುವ ಪ್ರವೃತ್ತಿ ಮುಂದುವರಿಸಿದರೂ ಯಾರು ಕ್ರಮವಹಿಸಿಲ್ಲ.
ಸದ್ಯ ಅಂತರಗಂಗೆ ಬೆಟ್ಟದ ಮಳೆ ನೀರು ಕೀಲುಕೋಟೆ, ಮುನೇಶ್ವರ ನಗರ, ರಹಮತ್ ನಗರ ಮುಖಾಂತರ ಹಾದುಹೋಗುವ ರಾಜಕಾಲುವೆಗಳಿಗೆ ತ್ಯಾಜ್ಯ ಎಸೆಯುತ್ತಿರುವುದರಿಂದ ಇದೇ ರಾಜಕಾಲುವೆ ನೀರು ಕೋಲಾರಮ್ಮ ಕೆರೆಗೆ ಹರಿಯುವುದರಿಂದ ಕೆರೆಯ ಪರಿಸರ ಹಾಳಾಗುತ್ತಿದೆ.
ಇನ್ನು ರಾಜಕಾಲುವೆ ಪಕ್ಕದಲ್ಲಿರುವ ರಾಜನ್ ನಗರದ ಉರ್ದು ಪ್ರಾಥಮಿಕ ಶಾಲೆ, ಅಂಗನವಾಡಿ ಮಕ್ಕಳಿಗೆ ಹಾಗೂ ಅಲ್ಲಿನ ಜನವಸತಿಗೆ ತ್ಯಾಜ್ಯದ ದುರ್ವಾಸನೆ ನಿತ್ಯ ಕಿರಿಕಿರಿಯುಂಟು ಮಾಡುತ್ತಿದೆ. ಹಲವು ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದರೆ ಇದೆಲ್ಲದರ ಪರಿವೆಯೇ ಇಲ್ಲದೆ ನಗರಸಭೆಯವರೇ ಜೆಸಿಬಿ ಮೂಲಕ ನಗರದ ತ್ಯಾಜ್ಯವನ್ನು ರಾಜಕಾಲುವೆಗೆ ತಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರ ನಿವಾಸಿಗಳು ರಾಜಕಾಲುವೆಗೆ ಕಸ ಎಸೆಯುವುದರ ಜತೆಗೆ ತ್ಯಾಜ್ಯ ನೀರನ್ನು ಒಳ ಚರಂಡಿಗೆ ಬಿಡದೆ ನೇರವಾಗಿ ರಾಜಕಾಲುವೆಗೆ ಬಿಡುತ್ತಿದ್ದಾರೆ. ಮಳೆ ನೀರು ಹರಿಯಬೇಕಾದ ರಾಜಕಾಲುವೆಯಲ್ಲಿ ಚರಂಡಿ ನೀರು ಹಾಗೂ ತ್ಯಾಜ್ಯ ತುಂಬಿದೆ. ಸುತ್ತಲೂ ಕಸಕೊಳೆತ ದುರ್ವಾಸನೆ ಹಬ್ಬಿದೆ. ಮಳೆ ಬಂದಾಗ ನಗರದ ತ್ಯಾಜ್ಯ ನೀರಿನ ರಭಸಕ್ಕೆ ಕೋಲಾರಮ್ಮನ ಕೆರೆಗೆ ಸೇರುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನೆವಾಗಿಲ್ಲ. | ಲ$್ಮದೇವಮ್ಮ ರಮೇಶ್, ನಗರಸಭೆ ಸದಸ್ಯೆ, ರಾಜನ್ ನಗರ ರಾಜಕಾಲುವೆಗೆ ಕಸ ಸುರಿಯುತ್ತಿರುವುದರಿಂದ ಕಾಲುವೆಯಲ್ಲಿ ಹರಿಯಬೇಕಾದ ಮಳೆ ನೀರು ವಾರ್ಡ್ಗಳಿಗೆ ನುಗ್ಗುತ್ತದೆ. ಅಲ್ಲದೆ ಕಾಲುವೆ ಕಸ ಕೊಳೆತು ದುರ್ವಾಸನೆ ಬೀರುತ್ತದೆ. ನಾಲ್ಕೆ$ದು ವರ್ಷಗಳಿಂದ ಕಾಲುವೆ ಸ್ವಚ್ಛಗೊಳಿಸಿಲ್ಲ. | ಮಹಮದ್ ಆಸಿಫ್, ರಾಜನ್ನಗರ ನಿವಾಸಿ