ನಾಳೆ ಕರ್ನಾಟಕದಲ್ಲಿ ”ಗರಡಿ“ಯದ್ದೇ ಹವಾ, ಕುಸ್ತಿ ಪಟುಗಳ ಜೀವನಾಧಾರಿತ ಚಿತ್ರ

gar
Published on

ಬಹುನಿರೀಕ್ಷೆಯ ಗರಡಿ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಸೆಯಂತೆ ಯಶಸ್ಸು ಸೂರ್ಯ ಈ ಸಿನಿಮಾದ ಮೂಲಕ ಯಶಸ್ವಿ ನಾಯಕನಾಗೋ ಎಲ್ಲ ಲಕ್ಷಣ ಕಂಡುಬರುತ್ತಿದೆ. ಹಳ್ಳಿಗಳಲ್ಲಿ ಕುಸ್ತಿ ಅಖಾಡ ಹಾಗೂ ಕುಸ್ತಿ ಪಟುಗಳ ತಾಕತ್ ಏನು ಎಂಬುದರ ಕಥೆಯನ್ನು ಈ ಚಿತ್ರ ಒಳಗೊಂಡಿದೆ.


ಈ ಚಿತ್ರದಲ್ಲಿ ಕುಸ್ತಿ ಉಸ್ತಾದ್ ಆಗಿ ಬಿ.ಸಿ ಪಾಟೀಲ್, ಹಳ್ಳಿ ಕುಸ್ತಿ ಪಟುವಾಗಿ ಯಶಸ್ ಸೂರ್ಯ ನಟಿಸಿದ್ದಾರೆ. ಯೋಗರಾಜ್ ಭಟ್ರ ಸಿನಿಮಾ ಅಂದ್ರೆ ಅಲ್ಲಿ ಒಂದುವ ವಿಶೇಷವಾದುದ್ದು ಏನಾದ್ರೂ ಇದ್ದೇ ಇರುತ್ತೆ.


ಗರಡಿ 2023ರ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುವ ಸೂಚನೆ ಕೊಟ್ಟಿದೆ. ಹಳ್ಳಿಗಳಲ್ಲಿ ಕುಸ್ತಿ ಅಖಾಡ ಹಾಗೂ ಕುಸ್ತಿ ಪಟುಗಳ ತಾಕತ್ ಏನು ಎಂಬುದರ ಕಥೆಯನ್ನು ಈ ಚಿತ್ರ ಒಳಗೊಂಡಿದೆ.


ರಾಣೆಬೆನ್ನೂರಿನಲ್ಲಿ ಅದ್ಧೂರಿಯಾಗಿ ಟ್ರೇಲರ್ ಅನಾವರಣಗೊಳಿಸಲಾಗಿತ್ತು. ಟ್ರೇಲರ್ ಬಿಡುಗಡೆಯ ಸುಂದರ ಕ್ಷಣಗಳ ವಿಡಿಯೋವನ್ನು ಸಹ ಚಿತ್ರತಂಡ ರಿವೀಲ್ ಮಾಡಿ ಗಮನ ಸೆಳೆದಿದೆ.


ಈ ಚಿತ್ರದಲ್ಲಿ ನಟ‌ ಯಶಸ್ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ಬಿ.ಸಿ ಪಾಟೀಲ್ ಅಲ್ಲದೇ, ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್, ನಯನ ಮುಂತಾದವರು ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಸಖತ್​​ ಸ್ಟೆಪ್ಸ್​​​ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net