

ಆಂಧ್ರಪ್ರದೇಶ: 'ಅರ್ಜುನ್ ರೆಡ್ಡಿ' ಸಿನಿಮಾದ ಮೂಲಕ ಟಾಲಿವುಡ್ನ ಸೆನ್ಸೇಷನ್ ನಟ ಎಂಬ ಪಟ್ಟ ಪಡೆದ ಸ್ಟಾರ್ ಹೀರೋ ವಿಜಯ್ ದೇವರಕೊಂಡ ಸದ್ಯ ಹೊಸ ಹೊಸ ಪ್ರಾಜೆಕ್ಟ್ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇನ್ನು ಈ ಮಧ್ಯೆ ತಮ್ಮ ಮುಂಬರುವ ಫ್ಯಾಮಿಲಿ ಸ್ಟಾರ್ ಸಿನಿಮಾದ ರಿಲೀಸ್ ಕೆಲಸದಲ್ಲಿ ಸಕ್ರಿಯರಾಗಿರುವ ವಿಜಯ್ ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು.
ಸೀತಾರಾಮಂ ನಟಿ ಮೃಣಾಲ್ ಠಾಕೂರ್ ಮತ್ತು ವಿಜಯ್ ದೇವರಕೊಂಡ ಮುಖ್ಯಭೂಮಿಕೆಯಲ್ಲಿರುವ 'ಫ್ಯಾಮಿಲಿ ಸ್ಟಾರ್' ಚಿತ್ರವನ್ನು ಪರಶುರಾಮ್ ನಿರ್ದೇಶಿಸಿದ್ದು, ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್, ಮಾಸ್, ಕುಟುಂಬ ಹಾಗೂ ಮಕ್ಕಳ ಸಮೇತ ನೋಡುವಂತ ಒಂದೊಳ್ಳೆ ಚಿತ್ರ. ಪ್ರತಿಯೊಬ್ಬರೂ ಈ ಚಿತ್ರವನ್ನು ಎಂಜಾಯ್ ಮಾಡ್ತಾರೆ ಎಂದು ಹೇಳಿದ್ದಾರೆ. ಇದೇ ಏಪ್ರಿಲ್ 05ರಂದು ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇನ್ನು ಚಿತ್ರದ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿರುವ ವಿಜಯ್ ದೇವರಕೊಂಡ, ಇತ್ತೀಚೆಗೆ ನಡೆದ ಒಂದು ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ನಿರೂಪಕಿ ಸುಮಾ ವೇದಿಕೆಯ ಮೇಲೆ ಉಪಸ್ಥಿತರಿದ್ದವರೊಂದಿಗೆ ತಮಾಷೆ ಮಾಡುತ್ತಿದ್ದರು. ಹೀಗೆ ಮಾತನಾಡಿಸುವಾಗ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ಚರಣ್ ಅಭಿನಯಿಸುತ್ತಿರುವ ಚಿತ್ರದಲ್ಲಿ ಪುಟ್ಟ ಪಾತ್ರವನ್ನು ನಿರ್ವಹಿಸುತ್ತಿರುವ ಗಂಗವ್ವ ಎಂಬ ವೃದ್ಧೆಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು.
ನಾಯಕಿಯಾಗಿ ನಿಮಗೆ ಅವಕಾಶ ಸಿಕ್ಕರೆ ಯಾರೊಂದಿಗೆ ನಟಿಸಲು ಇಚ್ಛಿಸುತ್ತೀರಾ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗಂಗವ್ವ, ನಾನು ವಿಜಯ್ ದೇವರಕೊಂಡ ಜತೆ ನಟಿಸುತ್ತೀನಿ. ಅವರಿಗೆ ಹೀರೋಯಿನ್ ಆಗ್ತೀನಿ ಎಂದು ಹೇಳಿದರು. ಗಂಗವ್ವ ಮಾತಿಗೆ ಫಿದಾ ಆದ ದೇವರಕೊಂಡ ಅಜ್ಜಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಸದ್ಯ ಈ ವಿಡಿಯೋ ನೋಡುಗರ ಗಮನಸೆಳೆದಿದ್ದು, ವಿಜಯ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.